ಕೋಲಾರ: ತರಕಾರಿ ಮಾರುಕಟ್ಟೆಯಲ್ಲಿ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನಗರದಲ್ಲಿ ಸ್ವಯಂ ಸೇವಕರ ತಂಡದಿಂದ ಅಂಗಡಿಗಳ ಮುಂದೆ ಗೆರೆ ಹಾಕುವುದರ ಮೂಲಕ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸಿದರು.
ಕೊರೊನಾ ವೈರಸ್ ಕುರಿತು ಜಾಗೃತಿ: ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮನವಿ
ಒಂದರಿಂದ ಮತ್ತೊಂದು ಅಂಗಡಿಗೆ 3 - 4 ಮೀಟರ್ ಅಂತರವಿದೆ. ಗ್ರಾಹಕರು ತರಕಾರಿ ಖರೀದಿಸುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳವಂತೆ ಮಾಡಿದ್ದಾರೆ.
ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ
ಗ್ರಾಹಕರಿಗೆ ಅನುಕೂಲವಾಗುವಂತೆ ಜಿಲ್ಲಾಡಳಿತ, ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ತರಕಾರಿ ಮಾರುಕಟ್ಟೆಗೆ ವ್ಯವಸ್ಥೆ ಮಾಡಿದೆ. ಆದರೆ, ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಿನ್ನೆಲೆ ಅಂಗಡಿಗಳ ಮುಂದೆ ಒಬ್ಬರಿಂದ ಒಬ್ಬರು ಅಂತರ ಕಾಪಾಡಿಕೊಳ್ಳಲು ಚೌಕ್ಗಳನ್ನ ಹಾಕಲಾಗಿತ್ತು.