ಕೋಲಾರ :ಶ್ರೀನಿವಾಸಪುರ ಪಟ್ಟಣದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದಮುಳಬಾಗಿಲು ಪಕ್ಷೇತರ ಶಾಸಕ ಹೆಚ್. ನಾಗೇಶ್,ಸಚಿವ ಸ್ಥಾನ ನೀಡುವ ಕುರಿತು ಸಿಎಂ ಜೊತೆ ಮಾತನಾಡಿದ್ದು, ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದು ಹೇಳಿದ್ದಾರೆ.
ತಾನು ಸಿಎಂ ಕುಮಾರಸ್ವಾಮಿ ಅವರ ಒಳ್ಳೆ ಆಡಳಿತ ನೋಡಿ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದು, ಸಚಿವ ಸ್ಥಾನ ನೀಡುವುದಾಗಿ ಬುಧವಾರದವರೆಗೂ ಕಾಯುವಂತೆ ಸಿಎಂ ಭರವಸೆ ನೀಡಿದ್ದಾರೆ.
ಪಕ್ಷೇತರ ಶಾಸಕ ಹೆಚ್. ನಾಗೇಶ್ ಇನ್ನು ಕುಮಾರಸ್ವಾಮಿ ಅವರು ರಾಜ್ಯದ ಅಭಿವೃದ್ದಿಗೆ ಒತ್ತು ನೀಡುತ್ತಿರುವ ಸಲುವಾಗಿ ಸುಭದ್ರ ಸರ್ಕಾರಕ್ಕೆ ನಮ್ಮ ಬೆಂಬಲ ಇದೆ. ಅಲ್ಲದೆ ಸಚಿವ ಸ್ಥಾನ ಸಿಕ್ಕಿದರೆ ಖುಷಿಯಾಗುತ್ತದೆ, ಜೊತೆಗೆ ಜಿಲ್ಲೆಯ ಅಭಿವೃದ್ಧಿ ಕೆಲಸ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು..
ಇನ್ನು ಸಿಎಂ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಸಂತೋಷದ ವಿಷಯ, ಇದೊಂದು ಒಳ್ಳೆಯ ಕಾರ್ಯಕ್ರಮ, ಮುಂದಿನ ದಿನಗಳಲ್ಲಿ ಕೋಲಾರಕ್ಕೂ ಅವರನ್ನ ಕರೆತಂದು ಗ್ರಾಮ ವಾಸ್ತವ್ಯ ಮಾಡಿಸುವುದಾಗಿ ತಿಳಿಸಿದರು.