ಕೋಲಾರ:ಯುವಕನೊರ್ವಬಾಲಕಿಯರ ಹಾಸ್ಟೆಲ್‌ಗೆ ನುಗ್ಗಿ ಆತಂಕ ಸೃಷ್ಟಿಸಿದ್ದ ಘಟನೆ ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿರುವ ಮೆಟ್ರಿಕ್‌ಪೂರ್ವ ಬಾಲಕಿಯರ ಹಾಸ್ಟೆಲ್ನಲ್ಲಿ ನಿನ್ನೆ (ಗುರುವಾರ) ರಾತ್ರಿ ನಡೆದಿದೆ. ಬೇತಮಂಗಲ ನಿವಾಸಿ ಮುರಳಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಯುವಕ ನುಗ್ಗಿದ್ದರಿಂದ ಗಾಬರಿಗೊಂಡ ಬಾಲಕಿಯರು ಕಿರುಚಿದ್ದಾರೆ. ಅಕ್ಕಪಕ್ಕದವರು ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಹಾಸ್ಟೆಲ್ ವಾರ್ಡನ್ ಬೇತಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಹಾಸ್ಟಲ್ನಲ್ಲಿ 6 ರಿಂದ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 60ಕ್ಕೂ ಹೆಚ್ಚು ಬಾಲಕಿಯರಿದ್ದಾರೆ. ಇಲ್ಲಿನ ಕೊಠಡಿ ಬಾಗಿಲುಗಳಿಗೆ ಸರಿಯಾದ ಚಿಲಕ ವ್ಯವಸ್ಥೆ ಇಲ್ಲ. ಹೀಗಾಗಿ, ಬಾಲಕಿಯರು ಭಯದಲ್ಲಿ ಕಾಲಕಳೆಯುವಂತಹ ಸ್ಥಿತಿ ಇದೆ. ಹಾಸ್ಟೆಲ್ನಲ್ಲಿ ಭದ್ರತಾ ಸಿಬ್ಬಂದಿಯೂ ಇಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಯುವತಿಯರ ಖಾಸಗಿ ವಿಡಿಯೋ ಚಿತ್ರಿಕರಿಸುತ್ತಿದ್ದ ವ್ಯಕ್ತಿ ಅರೆಸ್ಟ್ :ಬೆಂಗಳೂರಲ್ಲಿ ನಡೆದ ಘಟನೆಯೊಂದರಲ್ಲಿ ಮಹಿಳೆಯರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಬ್ಯಾಂಕ್ ಉದ್ಯೋಗಿಯೊಬ್ಬನನ್ನು ಪೊಲೀಸರು ಬಂಧಿಸಿದ್ದರು. ಕೆಲದಿನಗಳ ಹಿಂದೆ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಮೂಲದ ಅಶೋಕ್ ಎಂಬವನನ್ನು ಬಂಧಿಸಲಾಗಿದೆ. ಮಹದೇವಪುರ ವ್ಯಾಪ್ತಿಯ ಪಿಜಿಯಲ್ಲಿ ವಾಸವಿದ್ದ ಆರೋಪಿ, ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ. ತನ್ನ ಪಿಜಿ ಮುಂಭಾಗದಲ್ಲಿ ಮಹಿಳಾ ಪಿಜಿ ಇತ್ತು. ಮಹಿಳಾ ಪಿಜಿಯ ಸ್ನಾನಗೃಹಕ್ಕೆ ಯಾರಾದರು ಬರ್ತಿದ್ದಂತೆ ಸ್ನಾನಗೃಹದ ವೆಂಟಿಲೇಷನ್ ಸ್ಥಳದಿಂದ ಮೊಬೈಲ್ನಲ್ಲಿ ಮಹಿಳೆಯರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ. ಇದೇ ರೀತಿ ವಿಡಿಯೋ ಮಾಡುತ್ತಿದ್ದಾಗ ಸ್ಥಳಿಯರೇ ನೋಡಿ ಆರೋಪಿಯನ್ನು ಹಿಡಿದು ಮಹದೇವಪುರ ಠಾಣಾ ಪೊಲೀಸರಿಗೆ ಒಪ್ಪಿಸಿದ್ದರು.
ಬಳಿಕ ಮೊಬೈಲ್ ಪರಿಶೀಲಿಸಿದಾಗ ಯುವತಿಯರ ಸ್ನಾನಗೃಹದ ಒಟ್ಟು 7 ವಿಡಿಯೋಗಳು ಪೊಲೀಸರಿಗೆ ದೊರೆತಿದ್ದವು. ಮೂರ್ನಾಲ್ಕು ತಿಂಗಳಿನಿಂದ ಆರೋಪಿ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದರು.
ಈತನ ವಿರುದ್ಧ ಮಹಿಳೆಯರ ಸ್ನಾನದ ವಿಡಿಯೋ ಮಾಡುವುದು, ಅವರ ಒಳ ಉಡುಪುಗಳನ್ನು ಕದಿಯುವ ಕೆಲವು ಪ್ರಕರಣಗಳು ದಾಖಲಾಗಿದ್ದವು. ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ವಿಧಾನಸೌಧ ಲೇಔಟ್ನಲ್ಲಿ ಇತ್ತೀಚೆಗೆ ಈ ರೀತಿಯ ಪ್ರಕರಣ ದಾಖಲಾಗಿದೆ. ವಿಕೃತ ಕಾಮುಕನೊಬ್ಬ ಬಾಡಿಗೆ ನೆಪದಲ್ಲಿ ಮನೆಗಳಿಗೆ ತೆರಳಿ ಅಸಭ್ಯವಾಗಿ ವರ್ತಿಸಿದ್ದ ಬಗ್ಗೆ ದೂರು ದಾಖಲಾಗಿತ್ತು.
ಇದನ್ನೂ ಓದಿ:ಖಾಸಗಿ ಶಾಲೆಯ ಬಾಲಕಿಯರ ವಾಶ್ ರೂಂನಲ್ಲಿ ಸಿಸಿಟಿವಿ ಕ್ಯಾಮರಾ! ಪ್ರಾಂಶುಪಾಲರಿಗೆ ಪೋಷಕರಿಂದ ಥಳಿತ