ಕರ್ನಾಟಕ

karnataka

ETV Bharat / state

ಬೈಕ್​ಗೆ ಬಸ್ ಡಿಕ್ಕಿ: ತಂದೆ-ಮಗ‌ ಸ್ಥಳದಲ್ಲೇ ಸಾವು - ಆಂಧ್ರದ ಕುಪ್ಪಂ ಬ

ಬೈಕ್​ಗೆ ಆಂಧ್ರ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್​ನಲ್ಲಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಮೃತಪಟ್ಟ ತಂದೆ ಮಗ

By

Published : Sep 7, 2019, 9:43 PM IST

ಕೋಲಾರ:ಬೈಕ್​ಗೆ ಆಂಧ್ರ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್​ನಲ್ಲಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಕೆಜಿಎಫ್ ಗಡಿ ಭಾಗದ ಆಂಧ್ರದ ಕುಪ್ಪಂ ಬಳಿ‌ ಅಪಘಾತ ನಡೆದಿದ್ದು, ಅಪಘಾತದಲ್ಲಿ ತಂದೆ-ಮಗ‌ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಗ್ನ ಪತ್ರಿಕೆ ನೀಡಲು ಬೈಕ್​ನಲ್ಲಿ ಹೋಗುತ್ತಿದ್ದ ಬಂಗಾರಪೇಟೆ ತಾಲೂಕಿನ ಚಿಕ್ಕತುಮಟಗೆರೆ ಗ್ರಾಮದ ವೆಂಕಟೇಶ್ (57), ಕನಕರಾಜ್ (27)ಗೆ ಆಂಧ್ರದ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತನ್ನ ದೊಡ್ಡ ಮಗನ‌ ವಿವಾಹ ಪತ್ರಿಕೆಗಳನ್ನು ಹಂಚಲು ಹೋಗುತ್ತಿದ್ದಾಗ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಆಂಧ್ರದ ರಾಳ್ಳಬೂದಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details