ಕೋಲಾರ: ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗ ಸಾಗಿಸುವ ವೇಳೆ ಆ್ಯಂಬುಲೆನ್ಸ್ ಕೆಟ್ಟು ನಿಂತ ಪರಿಣಾಮ ಗ್ರಾಮಸ್ಥರು ಆ್ಯಂಬುಲೆನ್ಸ್ನ್ನು ನೂಕಿ ಚಾಲನೆಗೆ ಪ್ರಯತ್ನಿಸಿರುವ ಘಟನೆ ಹೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಸಂಭವಿಸಿದೆ.
ಗಟ್ಟಹಳ್ಳಿ ಬಳಿ ಟೆಂಪೋವೊಂದು ಪಲ್ಟಿಯಾಗಿ ಐದು ಜನರು ಗಾಯಗೊಂಡಿದ್ದರು. ಈ ವೇಳೆ ಆ್ಯಂಬುಲೆನ್ಸ್ನಲ್ಲಿ ಗಾಯಾಳುಗಳನ್ನು ಹೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ಬಳಿಕ ಅಲ್ಲಿಂದ ಕೋಲಾರ ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನು ಸಾಗಿಸಲು ಮುಂದಾದಾಗ, ತಾಂತ್ರಿಕ ದೋಷದಿಂದ ಆ್ಯಂಬುಲೆನ್ಸ್ ಕೆಟ್ಟು ನಿಂತಿದೆ. ಸ್ಥಳದಲ್ಲೇ ಇದ್ದ ಗ್ರಾಮಸ್ಥರು ವಾಹನವನ್ನು ತಳ್ಳಿ ಚಾಲನೆಗೊಳಿಸಲು ಮುಂದಾದರಾದರೂ ವಾಹನ ಮಾತ್ರ ಅಲುಗಾಡಲಿಲ್ಲ. ಇದರಿಂದ ಗಾಯಾಳುಗಳು ಪರದಾಡುವಂತಾಯಿತು.