ಕೋಲಾರ: ಮದುವೆಯಾಗಿ 3 ವರ್ಷವಾದರೂ ಮಕ್ಕಳಾಗಿಲ್ಲ ಎಂದು ಹಾಗೂ ವರದಕ್ಷಿಣೆ ಕಿರುಕುಳ ನೀಡಿ ಗೃಹಿಣಿ ಕೊಲೆ ಮಾಡಿರುವ ಆರೋಪ ಕೋಲಾರದಲ್ಲಿ ಕೇಳಿ ಬಂದಿದೆ. ಕೋಲಾರ ನಗರದ ವಿನಾಯಕ ನಗರ ಬಡಾವಣೆಯಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ. ಸೆಹರ್ ಅಂಜುಂ(23) ಕೊಲೆಯಾದ ಗೃಹಿಣಿ. ಪತಿ ಅಪ್ಜಲ್ ಹಾಗೂ ಅತ್ತೆ ತನ್ವೀರ್ ಬೇಗಂ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. 3 ವರ್ಷದ ಹಿಂದೆ ಅಂಜುಂ ಹಾಗೂ ಅಫ್ಜಲ್ಗೆ ಮದುವೆಯಾಗಿತ್ತು. ಘಟನೆ ಸಂಬಂಧ ಗಲ್‌ಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ಕೈಗೊಂಡಿದ್ದಾರೆ.
ಕೋಲಾರ: ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಕಿರುಕುಳ ನೀಡಿ ಗೃಹಿಣಿ ಕೊಲೆ ಆರೋಪ - ಕೋಲಾರ ನಗರದ ವಿನಾಯಕ ನಗರ
ಕೋಲಾರದಲ್ಲಿ ವರದಕ್ಷಿಣೆ ಕಿರುಕುಳ ನೀಡಿ ಗೃಹಿಣಿ ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ.
ಕೋಲಾರ: ಮಕ್ಕಳಾಗಿಲ್ಲ ಹಾಗೂ ವರದಕ್ಷಿಣೆ ಕಿರುಕುಳ ನೀಡಿ ಗೃಹಿಣಿ ಕೊಲೆ ಆರೋಪ
Published : Nov 13, 2023, 4:25 PM IST