ಕೋಲಾರ:ಆರೋಗ್ಯ ಇಲಾಖೆಯವರು ಮಾಡಿರುವ ಎಡವಟ್ಟಿನಿಂದ, ಕೊರೊನಾ ಟೆಸ್ಟ್ ಮಾಡದೆಯೇ ಪಾಸಿಟಿವ್ ಎಂದು ವರದಿ ಬಂದಿದೆ ಎನ್ನಲಾಗ್ತಿದೆ. ಇದು ಅನುಮಾನಕ್ಕೆ ಕಾರಣವಾಗಿದೆ. ಕೊರೊನಾ ಪರೀಕ್ಷೆ ನಡೆಸದೆ ಪಾಸಿಟಿವ್ ಎಂದು ಆರೋಗ್ಯ ಇಲಾಖೆ ವರದಿ ನೀಡಿದ್ದು, ಇದರಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕೋಲಾರ ತಾಲೂಕಿನ ವಕ್ಕಲೇರಿ ಗ್ರಾಮಪಂಚಾಯತ್ ವ್ಯಾಪ್ತಿಗೆ ಸೇರಿದ ಕೂತಾಂಡಹಳ್ಳಿ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಕೊರೊನಾ ಪರೀಕ್ಷೆ ನಡೆಸದೆ ಪಾಸಿಟಿವ್ ಎಂದು ವರದಿ ನೀಡಲಾಗಿದೆ. ಕೂತಾಂಡಹಳ್ಳಿ ಗ್ರಾಮದ ಯಲ್ಲಪ್ಪ, ಮಂಜುಳ ಹಾಗೂ ಮುರಳಿ ಎಂಬುವರ ಕುಟುಂಬಸ್ಥರು ಆರೋಗ್ಯವಾಗಿದ್ದು, ಇದುವರೆಗೂ ಯಾವುದೇ ಕೊರೊನಾ ಟೆಸ್ಟ್ ಮಾಡಿಸಿರಲಿಲ್ಲ. ಹೀಗಿದ್ದರೂ ಸಹ ಇಂದು ಮನೆ ಬಳಿ ಬಂದಿದ್ದ ವಕ್ಕಲೇರಿ ಗ್ರಾಮಪಂಚಾಯತ್ ಸಿಬ್ಬಂದಿ, ನಿಮಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ.