ಕೋಲಾರ: ಕೌಟುಂಬಿಕ ಕಲಹದ ಹಿನ್ನೆಲೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆಗೆ ಪೊಲೀಸ್ ಕಾನ್ಸ್ಟೇಬಲ್ ದೌರ್ಜನ್ಯ ನಡೆಸಿರುವ ಆರೋಪ ಇದೀಗ ಕೋಲಾರದಲ್ಲಿ ಕೇಳಿ ಬಂದಿದೆ. ಹಾಗಾಗಿ ನನಗೆ ನ್ಯಾಯ ಕೊಡಿಸಿ ಎಂದು ನಗರದ ಗಾಂಧಿ ಪ್ರತಿಮೆ ಎದುರು ಕಣ್ಣೀರಿಡುತ್ತಾ ಏಕಾಂಗಿ ಹೋರಾಟಕ್ಕೆ ಸಂತ್ರಸ್ತೆ ಮುಂದಾಗಿದ್ದಾಳೆ.
ಶ್ರೀನಿವಾಸಪುರ ತಾಲ್ಲೂಕಿನ ಶಿಗೇಹಳ್ಳಿ ನಿವಾಸಿ 6 ತಿಂಗಳ ಹಿಂದೆ ಕೌಟುಂಬಿಕ ಕಲಹ ಹಿನ್ನೆಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ವಿಚಾರಣೆ ನೆಪದಲ್ಲಿ ಮನೆಗೆ ಬಂದು ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಶ್ರೀನಿವಾಸಪುರ ಪೊಲೀಸ್ ಕಾನ್ಸ್ಟೇಬಲ್ ರವೀಂದ್ರ ವಿರುದ್ಧ ಅತ್ಯಾಚಾರ ಆರೋಪ ಮಾಡುತ್ತಿದ್ದು, ಆರೋಪಿಯನ್ನ ಬಂಧಿಸಿ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾಳೆ.