ಕರ್ನಾಟಕ

karnataka

ETV Bharat / state

ಚುನಾವಣೆ ಆಯ್ತು ಈಗ ಭರ್ಜರಿ ಬೆಟ್ಟಿಂಗ್‌! ಕೈ,ಕಮಲ ಅಭ್ಯರ್ಥಿ ಪರ ಭಾರೀ ಬಾಜಿ! - undefined

ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣಾ ಕಾವು ತಣ್ಣಗಾಗಿದ್ದೇ ತಡ, ಫಲಿತಾಂಶದ ಲೆಕ್ಕಾಚಾರ ಜೋರಾಗಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಚುನಾವಣೆ ನಡೆಸಿರುವ ರಾಜಕೀಯ ಪಕ್ಷಗಳ ಕಾರ್ಯಕರ್ತರ ಕುತೂಹಲಕ್ಕೆ ಲಗಾಮು ಇಲ್ಲದಂತಾಗಿದೆ. ಫಲಿತಾಂಶದ ಬಗ್ಗೆ ಸಮೀಕ್ಷೆಗಳು ಕುತೂಹಲ ಸೃಷ್ಠಿಸಿದ್ರೆ, ಬೆಟ್ಟಿಂಗ್ ದಂಧೆಕೋರರ ಉತ್ಸಾಹ ಇಮ್ಮಡಿಯಾಗಿದೆ.

ಚುನಾವಣೆ ನಂತರ ಕೋಲಾರದಲ್ಲಿ ಭರ್ಜರಿ ಬೆಟ್ಟಿಂಗ್​

By

Published : Apr 21, 2019, 5:07 PM IST

ಕೋಲಾರ:ಈ ಬಾರಿಲೋಕಸಭಾ ಚುನಾವಣೆ ಜಿದ್ದಾಜಿದ್ದಿನ ಕಣವಾಗಿದ್ದು, ಸಾಕಷ್ಟು ರೋಚಕತೆ ಪಡೆದುಕೊಂಡಿದೆ. ಫಲಿತಾಂಶಕ್ಕೆ ಇನ್ನೂ ಒಂದು ತಿಂಗಳು ಕಾಯಬೇಕಿದ್ದು, ಕಾಂಗ್ರೆಸ್​ ಹಾಗೂ ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಅವರು ಲಕ್ಷಾಂತರ ರೂ ಬಾಜಿ ಕಟ್ಟಿ ದುಡ್ಡು ಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.

ಚುನಾವಣೆ ನಂತರ ಕೋಲಾರದಲ್ಲಿ ಭರ್ಜರಿ ಬೆಟ್ಟಿಂಗ್​

ಮತದಾರರು ಹಾಗೂ ಕೆಲ ಕಾರ್ಯಕರ್ತರು ತಮ್ಮ ತಮ್ಮ ಅಭ್ಯರ್ಥಿಗಳೇ ಗೆಲ್ತಾರೆ ಎಂದು ಭಾರೀ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ. ಕೋಲಾರದಲ್ಲಿ 7 ಬಾರಿ ಸಂದರಾಗಿರುವ ಕೆ.ಎಚ್.ಮುನಿಯಪ್ಪ ಅವರಾ ಅಥವಾ ಬಿಜೆಪಿಯ ಎಸ್.ಮುನಿಸ್ವಾಮಿನಾ ಎಂದು ಗೆಲುವಿನ ಬಗ್ಗೆ ಬೆಟ್ಟಿಂಗ್ ಜೋರಾಗಿದೆ.

ಕೆಲವರಂತೂ, ಅಭ್ಯರ್ಥಿಗಳ, ಪಕ್ಷಗಳ ಪರವಾಗಿ ಲಕ್ಷಾಂತರ ರೂಪಾಯಿ ನಗದು, ಚಿನ್ನ-ಬೆಳ್ಳಿ, ವಾಹನ, ನಿವೇಶನ, ಬೆಲೆ ಬಾಳುವ ಬೈಕ್, ಕಾರುಗಳ ಜೊತೆಗೆ ಜಮೀನುಗಳನ್ನೇ ಜೂಜಿನಲ್ಲಿಟ್ಟಿದ್ದಾರೆ. ಹಾಗಾಗಿ ಮತ ಎಣಿಕೆಯ ದಿನಕ್ಕಾಗಿ ಕುತೂಹಲ ತೀವ್ರವಾಗುತ್ತಿದೆ.

For All Latest Updates

TAGGED:

ABOUT THE AUTHOR

...view details