ಕೋಲಾರ:ವಿಶೇಷ ಚೇತನ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ, ಆಧಾರ್ ಕಾರ್ಡ್ ಇಲ್ಲ ದಯವಿಟ್ಟು ಸಹಾಯ ಮಾಡಿ ಎಂದು ಮಾಡಿದ ಮನವಿಗೆ ಬಂಗಾರಪೇಟೆ ತಾಲೂಕು ಆಡಳಿತ ಸ್ಪಂದಿಸಿದೆ.
ಜಾಲತಾಣದಲ್ಲಿ ಅಂಗಲಾಚಿದ್ದ ವಿಶೇಷ ಚೇತನ ಯುವತಿಗೆ ಕೊನೆಗೂ ದೊರೆಯಿತು ಆಧಾರ್ ಕಾರ್ಡ್
ವಿಶೇಷ ಚೇತನ ಯುವತಿಯೊಬ್ಬಳ ಸಮಸ್ಯೆಗೆ ಸ್ಪಂದಿಸಿದ ಅಧಿಕಾರಿಗಳು ಆಕೆಯ ಮನೆಗೆ ತೆರಳಿ ಆಧಾರ್ ಕಾರ್ಡ್ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ವಿಶೇಷ ಚೇತನ ಯುವತಿಗೆ ಕೊನೆಗೂ ದೊರೆಯಿತು ಆಧಾರ್ ಕಾರ್ಡ್
ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹುನುಕುಂದ ಗ್ರಾಮದ ವಿಶೇಷ ಚೇತನ ಯವತಿ ಶಾರದ (22) ಆಧಾರ್ ಕಾರ್ಡ್ ಇಲ್ಲದೆ ವೇತನವಿಲ್ಲ, ಪಡಿತರ ಸಾಮಗ್ರಿಗಳು ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಳು. ಇದನ್ನ ಗಮನಿಸಿದ ಸಮಾಜ ಸೇವಕ, ಕರುನಾಡು ಸೇವಕರ ಸಂಘದ ಸದಸ್ಯ ರಾಮ್ ಪ್ರಸಾದ್ ತಾಲೂಕು ಅಧಿಕಾರಿಗಳೊಂದಿಗೆ ಚರ್ಚಿಸಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಅದರಂತೆ ಅಧಿಕಾರಿಗಳು ಶಾರದ ಮನೆಗೆ ತೆರಳಿ ತಹಶೀಲ್ದಾರ್ ದಯಾನಂದ್ ನಿರ್ದೇಶನದಲ್ಲಿ ಆಧಾರ್ ಕಾರ್ಡ್ ಮಾಡಿಕೊಟ್ಟಿದ್ದಾರೆ. ಅಧಿಕಾರಿಗಳು ಹಾಗೂ ಸಮಾಜ ಸೇವಕರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.