ಕೋಲಾರ :ಇಂದಿರಾ ಕ್ಯಾಂಟೀನ್ಗೆ ಹೆಸರಿಡುವ ಕಾಲದಲ್ಲಿಯೇ ಆಕ್ಷೇಪ ಮಾಡಬೇಕಿತ್ತು. ಹೆಸರು ಇಟ್ಟಾಗಿದೆ. ಮತ್ತೆ ಯಾಕೆ ಕ್ಯಾತೆ ತೆಗೆಯುತ್ತಿದ್ದಾರೆ ಎಂದು ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ಹೇಳಿದರು.
ನಗರದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಕ್ಯಾಂಟೀನ್ಗೆ ಹೆಸರಿಡುವ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ಬೇಡ. ಹೆಸರು ಇಟ್ಟ ನಂತರ ಕಾಂಗ್ರೆಸ್ ಬಿಟ್ಟು ಎಷ್ಟೋ ಪರ್ಯಾಯ ಪಕ್ಷಗಳು ಅಧಿಕಾರಕ್ಕೆ ಬಂದಿವೆ. ಬಿಜೆಪಿ ಸರ್ಕಾರವೂ ಸಹ ಅಧಿಕಾರಕ್ಕೆ ಬಂದಿದೆ. ನಮಗೆ ಹೆಸರು ಇಷ್ಟ ಇಲ್ಲ ತೆಗೆದು ಹಾಕ್ತೀವಿ ಎಂದು ತೆಗೆದು ಹಾಕಬೇಕು. ಅದನ್ನು ಬಿಟ್ಟು ಕೆಟ್ಟ ಮಾತುಗಳನ್ನು ಆಡಬಾರದು ಎಂದರು.