ಕರ್ನಾಟಕ

karnataka

ETV Bharat / state

ಕೋಲಾರ ಬೆಸ್ಕಾಂ ಸಬ್ ಸ್ಟೇಷನ್​ನಲ್ಲಿ ಅಗ್ನಿ ಅವಘಡ : ಅಕ್ಕಪಕ್ಕದ ಏರಿಯಾಗಳಿಗೆ ಆವರಿಸಿದ ಹೊಗೆ - Accidental Fire at Bescom Substation

ಬೆಸ್ಕಾಂನ ಸಬ್ ಸ್ಟೇಷನ್ ಹೆಚ್ಚಾಗಿ ಸಾರ್ವಜನಿಕರು ವಹಿವಾಟು ನಡೆಸುವಂತಹ ಸ್ಥಳದಲ್ಲಿರುವುದರಿಂದ‌ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸಾವಿರಾರು ಜನರು ಬೆಂಕಿ ನೋಡಲು ಸ್ಥಳಕ್ಕಾಗಮಿಸಿದರು. ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಸಾರ್ವಜನಿಕರನ್ನು ಚದುರಿಸಿದ್ದಾರೆ..

Accidental Fire
ಅಗ್ನಿ ಅವಘಡ

By

Published : Jul 3, 2021, 4:56 PM IST

ಕೋಲಾರ: 100 ಎಂವಿಎ ಟಿಸಿ ಬರ್ನ್ ಆದ ಪರಿಣಾಮ ಬೆಸ್ಕಾಂ ಸಬ್ ಸ್ಟೇಷನ್​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕಕ್ಕೊಳಗಾದ ಘಟನೆ ಕೋಲಾರದಲ್ಲಿ ಜರುಗಿದೆ‌.

ಬೆಸ್ಕಾಂ ಸಬ್ ಸ್ಟೇಷನ್​ನಲ್ಲಿ ಕಾಣಿಸಿಕೊಂಡ ಬೆಂಕಿ

ಕೋಲಾರದ ಮಹಾಲಕ್ಷ್ಮಿ ಬಡಾವಣೆ ಬಳಿ ಇರುವ ಬೆಸ್ಕಾಂ ಸಬ್ ಸ್ಟೇಷನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಟ್ರಾನ್ಸ್​ಫಾರ್ಮರ್​​ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ಬೆಂಕಿಗಾಹುತಿಯಾಗಿವೆ. ಆಕಸ್ಮಿಕವಾಗಿ ಬೆಂಕಿ ಕಾಣಿಸಿದ ಹಿನ್ನೆಲೆ ಅಕ್ಕಪಕ್ಕದ ಏರಿಯಾಗಳಿಗೂ ದಟ್ಟವಾದ ಹೊಗೆ ಆವರಿಸಿರೋದ್ರಿಂದ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಸ್ಕಾಂನ ಸಬ್ ಸ್ಟೇಷನ್ ಹೆಚ್ಚಾಗಿ ಸಾರ್ವಜನಿಕರು ವಹಿವಾಟು ನಡೆಸುವಂತಹ ಸ್ಥಳದಲ್ಲಿರುವುದರಿಂದ‌ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸಾವಿರಾರು ಜನರು ಬೆಂಕಿ ನೋಡಲು ಸ್ಥಳಕ್ಕಾಗಮಿಸಿದರು. ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಸಾರ್ವಜನಿಕರನ್ನು ಚದುರಿಸಿದ್ದಾರೆ.

ಇನ್ನು, ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ABOUT THE AUTHOR

...view details