ಕರ್ನಾಟಕ

karnataka

ETV Bharat / state

ಕೋಲಾರ: ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳು ಎಸಿಬಿ ಬಲೆಗೆ

ನಗರಸಭೆ ಬಿಲ್ ಕಲೆಕ್ಟರ್ ಹಾಗೂ ಮುಳಬಾಗಿಲು ಗ್ರಾಮಲೆಕ್ಕಿಗನನ್ನು ಲಂಚ ಪಡೆದ ಆರೋಪದಲ್ಲಿ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ.

acb-officials-attack-in-kolar
ಅಧಿಕಾರಿ ಮೇಲೆ ಎಸಿಬಿ ದಾಳಿ

By

Published : Feb 9, 2021, 12:16 AM IST

ಕೋಲಾರ: ಲಂಚ ಪಡೆಯುತ್ತಿದ್ದ ಆಪಾದನೆಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ನಗರಸಭೆ ಬಿಲ್ ಕಲೆಕ್ಟರ್ ಹಾಗೂ ಮುಳಬಾಗಿಲು ಗ್ರಾಮಲೆಕ್ಕಿಗನನ್ನು ಲಂಚ ಪಡೆದ ಆರೋಪದಲ್ಲಿ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಕೋಲಾರ ನಗರಸಭೆಯ ಬಿಲ್ ಕಲೆಕ್ಟರ್ ವೆಂಕಟರಮಣ ಖಾತೆ ಬದಲಾವಣೆಗೆ ಲಂಚದ ಬೇಡಿಕೆಯಿಟ್ಟಿದ್ದು, ಆಸೀಫ್ ಎಂಬುವರಿಂದ 18 ಸಾವಿರ ರೂ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಓದಿ:ನಾಳೆ ಸಭಾಪತಿ ಸ್ಥಾನಕ್ಕೆ ಚುನಾವಣೆ.. ಹೊರಟ್ಟಿ ಬೆಂಬಲಿಸಲು ಬಿಜೆಪಿ ಸದಸ್ಯರಿಗೆ ಸಿಎಂ ಸೂಚನೆ..

ಮುಳಬಾಗಿಲು ತಾಲೂಕು ಕಚೇರಿಯ ಗ್ರಾಮ ಲೆಕ್ಕಿಗ ಕಿರಣ್ ಕುಮಾರ್ ಎಂಬುವವರು ಕಚೇರಿಯಲ್ಲಿ ಪಹಣಿ ಬದಲಾವಣೆಗೆ ಸಂತೋಷ್​ ಕುಮಾರ್ ಎಂಬುವವರಿಂದ 1 ಲಕ್ಷ ರೂ. ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೋಲಾರ ಎಸಿಬಿ ಡಿವೈಎಸ್ಪಿ ಪುರುಷೋತ್ತಮ ಹಾಗು ಫಾರೂಕ್ ಪಾಷ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details