ಕರ್ನಾಟಕ

karnataka

ETV Bharat / state

ಮನೆ ನಿರ್ಮಾಣಕ್ಕೆ ಪರವಾನಗಿ ನೀಡಲು ಲಂಚ ಸ್ವೀಕಾರ: ನಗರಸಭೆ ಅಧಿಕಾರಿ ಎಸಿಬಿ ಬಲೆಗೆ - ACB officers raid

ಮನೆ ನಿರ್ಮಾಣಕ್ಕೆ ಪರವಾನಗಿ ನೀಡಲು ವ್ಯಕ್ತಿಯೋರ್ವರಿಂದ ಲಂಚ ಪಡೆಯುವ ವೇಳೆ ನಗರಸಭೆ ಅಧಿಕಾರಿಯೋರ್ವರು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಕೋಲಾರದಲ್ಲಿ ಜರುಗಿದೆ.

Kolar

By

Published : Sep 13, 2019, 4:54 PM IST

ಕೋಲಾರ :ಮನೆ ನಿರ್ಮಾಣ ಪರವಾನಿಗೆಗಾಗಿ ವ್ಯಕ್ತಿಯೋರ್ವರಿಂದ ಲಂಚ ಪಡೆಯುವ ವೇಳೆ ನಗರಸಭೆ ಅಧಿಕಾರಿಯೋರ್ವರು ಎಸಿಬಿ ಬಲೆಗೆ ಬಿದ್ದಿರುವ ಘಟನೆ ಕೋಲಾರದಲ್ಲಿ ಜರುಗಿದೆ.

ನಗರಸಭೆ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು

ನಗರಸಭೆಯ ಎಇಇ ಸುಧಾಕರ್ ಶೆಟ್ಟಿ ಎಂಬ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದು, ನಗರದ ಕಾಳಮ್ಮನ ಬಡಾವಣೆಯ ನಿವಾಸಿ ಚಲಪತಿ ಎಂಬುವವರಿಂದ ಎರಡು ಸಾವಿರ ರೂಪಾಯಿ ಲಂಚದ ಹಣ ಪಡೆಯುವ ವೇಳೆ ಸಿಕ್ಕಿ ಬಿದ್ದಿದ್ದಾರೆ. ಎಸಿಬಿ ಇನ್​ಸ್ಪೆಕ್ಟರ್ ವೆಂಕಟಾಚಲಪತಿ ನೇತೃತ್ವದ ತಂಡ ನಗರಸಭೆಯ ಮೇಲೆ ದಾಳಿ ನಡೆಸಿದ್ದು, ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details