ಕೋಲಾರ:ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಕಂಡಕ್ಟರ್ ಹಾಗೂ ಡ್ರೈವರ್ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದೆ.
ಯುವಕರಿಂದ ಕಂಡಕ್ಟರ್, ಡ್ರೈವರ್ ಮೇಲೆ ಹಲ್ಲೆ... ಬಸ್ಟ್ಯಾಂಡ್ನಲ್ಲಿ ಬೈಕ್ ನಿಲ್ಲಿಸಿದ್ದನ್ನ ಪ್ರಶ್ನಿಸಿದ್ದೇ ತಪ್ಪಾ! - ಕೋಲಾರ ಸುದ್ದಿ
ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಕಂಡಕ್ಟರ್ ಹಾಗೂ ಡ್ರೈವರ್ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದೆ.
ಬೈಕ್ ನಿಲ್ಲಿಸಿದ್ದನ್ನ ಪ್ರಶ್ನೆಸಿದ್ದಕ್ಕೆ ಯುವಕರಿಂದ ಕಂಡಕ್ಟರ್ ಹಾಗೂ ಡ್ರೈವರ್ ಮೇಲೆ ಹಲ್ಲೆ
ಕಂಡಕ್ಟರ್ ಕಲ್ಲಪ್ಪ ಹಾಗೂ ಡ್ರೈವರ್ ಲಕ್ಷ್ಮಣ ಗೌಡ ಹಲ್ಲೆಗೊಳಗಾಗಿರುವ ನೌಕರರು. ಶ್ರೀನಿವಾಸಪುರ ಬಸ್ ನಿಲ್ದಾಣದ ಫ್ಲಾಟ್ ಫಾರಂ ಮೇಲೆ ಯುವಕರು ಬೈಕ್ ನಿಲ್ಲಿಸಿಕೊಂಡಿದ್ದರು. ಇದನ್ನ ಪ್ರಶ್ನಿಸಿದ್ದಕ್ಕೆ ಡ್ರೈವರ್ ಹಾಗೂ ಕಂಡಕ್ಟರ್ ಮೇಲೆ ಐವರು ಯುವಕರು ಮನಬಂದಂತೆ ಹಲ್ಲೆ ನಡೆಸಿ, ಪರಾರಿಯಾಗಿದ್ದಾರೆ.
ಹಲ್ಲೆಗೊಳಗಾದ ಬಸ್ ಕಂಡಕ್ಟರ್ ಹಾಗೂ ಡ್ರೈವರ್ಗೆ ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಶ್ರೀನಿವಾಸಪುರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.