ಕರ್ನಾಟಕ

karnataka

ETV Bharat / state

ಕುಡಿದ ಅಮಲಿನಲ್ಲಿ ಚಿಕ್ಕಪ್ಪನನ್ನೇ ಕೊಂದ ಬಾಲಕ! - kolara kill news

ನಿದ್ದೆಗೆ ಜಾರಿದ ವಿಜಯ್ ಕುಮಾರ್​ ಮೇಲೆ ಬಾಲಕ ದಾಳಿ ಮಾಡಿ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ವಿಷಯ ತಿಳಿದ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಮಾಲೂರು ಪೊಲಿಸರಿಗೆ ಒಪ್ಪಿಸಿದ್ದಾರೆ.

kill
ಕೊಲೆ

By

Published : Nov 2, 2020, 5:32 PM IST

ಕೋಲಾರ: ಕ್ಷುಲ್ಲಕ ಕಾರಣಕ್ಕೆ ಬಾಲಕನೋರ್ವ ತನ್ನ ಚಿಕ್ಕಪ್ಪನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಬೆನ್ನಘಟ್ಟ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ವಿಜಯ್ ಕುಮಾರ್ ಕೊಲೆಯಾದ ವ್ಯಕ್ತಿ. ಈತನ ಅಣ್ಣನ ಮಗ ಕುಡಿದ ಅಮಲಿನಲ್ಲಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕಳೆದ ರಾತ್ರಿ ವಿಜಯ್ ಕುಮಾರ್ ಹಾಗೂ ಆರೋಪಿ ಬಾಲಕ ಇಬ್ಬರು ಕಂಠಪೂರ್ತಿ ಕುಡಿದು ಕ್ಷುಲ್ಲಕ‌ ಕಾರಣಕ್ಕೆ ತಮ್ಮ ಮನೆ ಬಳಿ ಜಗಳ ಮಾಡಿಕೊಂಡಿದ್ದಾರೆ. ಅಲ್ಲದೆ ಇಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಕೈ ಕೈ ಮಿಲಾಯಿಸಿದ್ದಾರೆ. ಇದಾದ ಬಳಿಕ ನಿದ್ದೆಗೆ ಜಾರಿದ ವಿಜಯ್ ಕುಮಾರ್​ ಮೇಲೆ ಬಾಲಕ ದಾಳಿ ಮಾಡಿ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ವಿಷಯ ತಿಳದ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಮಾಲೂರು ಪೊಲಿಸರಿಗೆ ಒಪ್ಪಿಸಿದ್ದಾರೆ.

ಕೊಲೆ ಕುರಿತಾಗಿ ಮಾತನಾಡಿದ ಸ್ಥಳೀಯರು

ಇಲೆಕ್ಟ್ರಿಕಲ್‌ ಕೆಲಸ ಮಾಡಿಕೊಂಡಿದ್ದ ಅಣ್ಣನ ಮಗ ಮದ್ಯ ಹಾಗೂ ಗಾಂಜಾ ದಾಸನಾಗಿದ್ದು, ಕಳೆದ ಒಂದು ತಿಂಗಳ ಹಿಂದಷ್ಟೇ ತನ್ನ ತಂದೆಯನ್ನು ಕಳೆದುಕೊಂಡಿದ್ದ. ಚಿಕ್ಕಪ್ಪನೊಂದಿಗೆ ಹಗಲಿನಲ್ಲಿ ಸ್ನೇಹಿತನಂತೆ ಇರ್ತಿದ್ದ. ರಾತ್ರಿಯಾಗುತ್ತಿದ್ದಂತೆ ದಾಯಾದಿಗಳಾಗುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ABOUT THE AUTHOR

...view details