ಕರ್ನಾಟಕ

karnataka

ETV Bharat / state

ಸಾವನ್ನಪ್ಪಿದ್ದಾಳೆಂದು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡ ಕುಟುಂಬಕ್ಕೆ ಶಾಕ್​: ವೈದ್ಯರ ನಿರ್ಲಕ್ಷ್ಯಕ್ಕೆ ಆಕ್ರೋಶ - ಕೋಲಾರ ಲೇಟೆಸ್ಟ್ ನ್ಯೂಸ್

ಕೋಲಾರ ಜಿಲ್ಲೆಯ ಕೆಜಿಎಫ್​ನಲ್ಲಿರುವ ಸರ್ಕಾರಿ ಆಸ್ಪತ್ರೆ ಒಂದಲ್ಲ ಒಂದ ಎಡವಟ್ಟು ಮಾಡುತ್ತಲೇ ಇರುತ್ತದೆ. ಇದಕ್ಕೆ ಇಂದು ನಡೆದಿರುವ ಘಟನೆ ಉತ್ತಮ ಉದಾಹರಣೆಯಾಗಿದೆ.

ವೈದ್ಯರ ನಿರ್ಲಕ್ಷ್ಯಕ್ಕೆ ಕುಟುಂಬಸ್ಥರಿಂದ ಆಕ್ರೋಶ
A women family members protest against doctors in KGF

By

Published : Feb 20, 2021, 1:12 PM IST

ಕೋಲಾರ:ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಮನೆಗೆ ಕಳಿಸಿದ್ದ ಮಹಿಳೆ, ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ಉಸಿರಾಡಿರುವಂತಹ ಘಟನೆ ಜಿಲ್ಲೆಯ ಕೆಜಿಎಫ್​ನ​​ಲ್ಲಿ ನಡೆದಿದೆ.

ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಕುಟುಂಬಸ್ಥರು

ಕೆಜಿಎಫ್‌ ನಗರದ ಓಲ್ಡ್ ಓರಿಯಂಟ್ ಲೈನ್ ಬಡಾವಣೆಯಲ್ಲಿ ದೀಪಾ ಎಂಬ ಮಹಿಳೆ ಮನೆ ಬಳಿ ಕುಸಿದು ಬಿದ್ದಿದ್ದಳು. ಈ ವೇಳೆ, ಕುಟುಂಬಸ್ಥರು ಆಕೆಯನ್ನು ಕೆಜಿಎಫ್​​ನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ತಪಾಸಣೆ ನಡೆಸಿದ ಬೈದ್ಯರು ಮಾರ್ಗ ಮಧ್ಯೆದಲ್ಲಿಯೇ ಮಹಿಳೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಕುಟುಂಬಸ್ಥರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ, ಪವಾಡ ಎಂಬಂತೆ ಮಹಿಳೆ ಉಸಿರಾಡತೊಡಗಿದ್ದಾಳೆ. ಕೂಡಲೇ ಆಕೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ಸೇರಿಸಿದ್ದು, ಮಹಿಳೆ ಸದ್ಯ ಆರಾಮಗಿದ್ದಾಳೆ ಎನ್ನಲಾಗುತ್ತಿದೆ.

ಓದಿ: ಆತ್ಮೀಯರ ಜೊತೆ ಬೆಳಗ್ಗೆ ಸಿದ್ದರಾಮಯ್ಯ ವಾಯು ವಿಹಾರ: ಮನೆಯಲ್ಲಿ ಪಾಲಿಕೆ ಸದಸ್ಯರ ಸಭೆ

ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಘಟನೆ ಜರುಗಿದೆ ಎಂದು ಆರೋಪಿಸಿ ಮಹಿಳೆ ಕುಟುಂಬಸ್ಥರು ಆಸ್ಪತ್ರೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ABOUT THE AUTHOR

...view details