ಕೋಲಾರ: ಮಂಡ್ಯದ ವಿದ್ಯಾರ್ಥಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯದ 5 ಜನ ವಿದ್ಯಾರ್ಥಿಗಳಲ್ಲಿ ಒಬ್ಬನಾಗಿದ್ದು, ಕುಟುಂಬಸ್ಥರಲ್ಲಿ ಸಂತೋಷ ಮನೆ ಮಾಡಿದೆ.
ಮೂಲತಃ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಗ್ರಾಮದ ವಿದ್ಯಾರ್ಥಿಯಾಗಿರುವ ಎಂ.ಪಿ. ಧೀರಜ್ ರೆಡ್ಡಿ, ಮಂಡ್ಯ ತಾಲೂಕಿನ ಮಾರದೇವನಹಳ್ಳಿ ಶ್ರೀ ಸತ್ಯಸಾಯಿ ಸರಸ್ವತಿ ಇಂಗ್ಲೀಷ್ ಮಾಧ್ಯಮ ಬಾಯ್ಸ್ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ರಾಜ್ಯದ 5 ಜನ ಟಾಪರ್‌ಗಳ ಪೈಕಿ ಒಬ್ಬನಾಗಿದ್ದಾರೆ. ಎಂ. ಪ್ರಭಾಕರ್ ರೆಡ್ಡಿ, ಕೆ.ಸಿ.ಮಂಜುಳಾ ದಂಪತಿಯ ಮಗನಾಗಿದ್ದಾನೆ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯದ 5 ಜನ ವಿದ್ಯಾರ್ಥಿಗಳಲ್ಲಿ ಒಬ್ಬನಾದ ಮಂಡ್ಯದ ವಿದ್ಯಾರ್ಥಿ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ. ಚಂಗಲರಾಯರೆಡ್ಡಿ ಸ್ವಗ್ರಾಮದ ಈತ ರಾಜ್ಯಕ್ಕೆ ಟಾಪರ್ ಆಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾನೆ. ತಂದೆ ಆಂಧ್ರಪ್ರದೇಶ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ರೆ, ತಾಯಿ ಕೆಜಿಎಫ್ನ ಖಾಸಗಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದಾರೆ.
ಇನ್ನು ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಧೀರಜ್ ರೆಡ್ಡಿಗೆ ಸಿಹಿ ತಿನಿಸುವ ಮೂಲಕ ಶುಭ ಹಾರೈಸಿದ್ದಾರೆ. ಇನ್ನು ಮಗನ ಸಾಧನೆಗೆ ಪೋಷಕರು ಫುಲ್ ಖುಷಿಯಾಗಿದ್ದಾರೆ.