ಕೋಲಾರ: ಕೊಟ್ಟ ಹಣವನ್ನು ಕೇಳಿದ್ದಕ್ಕೆ ಸ್ನೇಹಿತನನ್ನು ರಾಡ್‌ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಮುಳಬಾಗಿಲಿನ ಪಳ್ಳಿಗರ ಪಾಳ್ಯದಲ್ಲಿ ನಡೆದಿದೆ. ನಾಗರಾಜ್ ಹತನಾದ ವ್ಯಕ್ತಿ. ಕಳೆದ ರಾತ್ರಿ 9.30 ಸುಮಾರಿಗೆ ಇದೇ ಏರಿಯಾದ ನಾಗರಾಜ್‌ನನ್ನು ಅಪ್ಪಿ ಎಂಬಾತ ರಾಡ್‌ನಿಂದ ಹೊಡೆದಿದ್ದಾನೆ. ರಕ್ತದ ಮಡುವಿನಲ್ಲೇ ಬಿದ್ದು ನಾಗರಾಜ್ ಅಲ್ಲೇ ಪ್ರಾಣಬಿಟ್ಟಿದ್ದಾನೆ.
ಕೋಲಾರ: ಕೊಟ್ಟ ಹಣ ಕೇಳಿದ್ದಕ್ಕೆ ಸ್ನೇಹಿತನನ್ನೇ ಕೊಂದ ಪಾಪಿ! - ಪಳ್ಳಿಗರ ಪಾಳ್ಯ
ಕೊಟ್ಟ ಸಾಲದ ಹಣವನ್ನು ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊರ್ವ ಸ್ನೇಹಿತನನ್ನೇ ಹತ್ಯೆ ಮಾಡಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲಿನ ಪಳ್ಳಿಗರ ಪಾಳ್ಯದಲ್ಲಿ ನಡೆದಿದೆ.
ಕೊಟ್ಟ ಸಾಲ ಮರಳಿ ಕೇಳಿದ್ದೇ ಸ್ನೇಹಿತರಾಗಿದ್ದ ನಾಗರಾಜ್ ಮತ್ತು ಅಪ್ಪಿ ನಡುವೆ ದ್ವೇಷ ಹುಟ್ಟಲು ಕಾರಣವಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ನಾಗರಾಜ್ ಬಳಿ ಆರೋಪಿ ಅಪ್ಪಿ 3 ಲಕ್ಷ ರೂಪಾಯಿ ಹಣಪಡೆದಿದ್ದನಂತೆ. ತಂಗಿ ಮದುವೆಗೆ ಕೇಳಿದಾಗ ಆರೋಪಿ ನಾಗರಾಜ್ ಕೊಟ್ಟಿರಲಿಲ್ಲವಂತೆ. ಇದೀಗ ತಂಗಿ ಮನೆಗೆ ಬಂದಿದ್ದಾಳೆ. ಈಗ ಹಣ ಬೇಕು ಎಂದು ಒತ್ತಾಯ ಮಾಡಿದ್ದಾನೆ. ಇದೇ ವಿಚಾರವಾಗಿ ಕೋಪಗೊಂಡಿದ್ದ ಅಪ್ಪಿ ನಾಗರಾಜ್‌ನನ್ನು ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮುಳಬಾಗಿಲು ನಗರ ಠಾಣಾ ಪೊಲೀಸರು ಆರೋಪಿ ಅಪ್ಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಮೃತ ನಾಗರಾಜ್ ತನ್ನ ಸ್ನೇಹಿತನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋಪಗಳಿವೆ. ಇದೇ ಕೊಲೆಗೆ ಕಾರಣವಾಯಿತಾ ಇಲ್ಲವೇ ಹಣದ ವಿಚಾರಕ್ಕೆ ಹತ್ಯೆ ಮಾಡಿದ್ದಾನೆಯೇ ಎಂಬುದು ಪೊಲೀಸರ ತನಿಖೆಯಿಂದ ಹೊರಬೀಳಬೇಕಿದೆ.