ಕೋಲಾರ: ನ್ಯಾಯಾಧೀಶರ ಮುಂದೆಯೇ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ: ಕೋರ್ಟ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ - suicide attempt in front of judge
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಈತನ ಪತ್ನಿ ಜೀವನಾಂಶಕ್ಕಾಗಿ ದಾವೆ ಹೂಡಿದ್ದಳು. ಹೀಗಾಗಿ ಕೆಲವು ದಿನಗಳಿಂದ ಪತ್ನಿಯಿಂದ ದೂರವಿದ್ದ ವ್ಯಕ್ತಿ, ಇತ್ತೀಚೆಗೆ ತನ್ನ ತಾಯಿ ಆನಾರೋಗ್ಯದಿಂದ ಇದ್ದ ಹಿನ್ನೆಲೆ ಆಕೆಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು ಎನ್ನಲಾಗಿದೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದಲ್ಲಿರುವ ನ್ಯಾಯಾಲಯದಲ್ಲಿ ಈ ಘಟನೆ ಜರುಗಿದ್ದು, ರವಿಕುಮಾರ್ (40) ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇನ್ನು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಈತನ ಪತ್ನಿ ಜೀವನಾಂಶಕ್ಕಾಗಿ ದಾವೆ ಹೂಡಿದ್ದಳು. ಹೀಗಾಗಿ ಕೆಲವು ದಿನಗಳಿಂದ ಪತ್ನಿಯಿಂದ ದೂರವಿದ್ದ ವ್ಯಕ್ತಿ ಇತ್ತೀಚೆಗೆ ತನ್ನ ತಾಯಿ ಆನಾರೋಗ್ಯದಿಂದ ಇದ್ದ ಹಿನ್ನೆಲೆ ಆಕೆಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು ಎನ್ನಲಾಗಿದೆ.
ಈ ಮಧ್ಯೆ ಪತ್ನಿ ನ್ಯಾಯಾಲಯದಲ್ಲಿ ಜೀವನಾಂಶಕ್ಕಾಗಿ ದಾವೆ ಹೂಡಿದ್ದು, ಪತ್ನಿಗೆ ಜೀವನಾಂಶ ನೀಡಲು ಆಗದೆ ನ್ಯಾಯಾಧೀಶರ ಮುಂದೆಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಈತನನ್ನು ನ್ಯಾಯಾಲಯದ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನು ಈ ಘಟನೆ ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.