ಕೋಲಾರ: ಯುವಕನ ಮೇಲೆ ಕಿಡಿಗೇಡಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಕೂತಾಂಡಹಳ್ಳಿಯಲ್ಲಿ ನಡೆದಿದೆ.
ಯುವಕನ ಮೇಲೆ ಕಿಡಿಗೇಡಿಗಳಿಂದ ಮಾರಣಾಂತಿಕ ಹಲ್ಲೆ - ಕೋಲಾರದಲ್ಲಿ ಯುವಕನ ಮೇಲೆ ಹಲ್ಲೆ
ಯುವಕನ ಮೇಲೆ ಕಿಡಿಗೇಡಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಹನುಮಂತ ಎಂಬಾತ ಹಲ್ಲೆಗೊಳಗಾಗಿರುವ ಯುವಕ. ಕಳೆದ ರಾತ್ರಿ ಅದೇ ಗ್ರಾಮದ ಅಭಿಷೇಕ್, ಅರವಿಂದ್ ಹಾಗೂ ಸೋಮಶೇಖರ್ ಎಂಬ ಕಿಡಿಗೇಡಿಗಳ ಗುಂಪು, ಕಾರಣವಿಲ್ಲದೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆಯೊಡ್ಡಿದ್ದಾರೆಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದ ಯುವಕನ ಬಳಿ ಇದ್ದ ನಗದು ಹಾಗೂ ಚಿನ್ನದ ಸರವನ್ನ ಕಸಿದುಕೊಂಡಿದ್ದಾರೆ. ಜೊತೆಗೆ ಮನೆ ಬಳಿ ನಿಲ್ಲಿಸಲಾಗಿದ್ದ ಬೈಕ್ ನ ಮುಂಭಾಗವನ್ನ ಪುಡಿ ಪುಡಿ ಮಾಡಿ ಪರಾರಿಯಾಗಿದ್ದರು.
ಹನುಮಂತನ ತಲೆಗೆ ಗಂಭೀರ ಗಾಯವಾಗಿದ್ದು, ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೆ ಕಾರಣ ತಿಳಿದುಬಂದಿಲ್ಲ. ಘಟನೆ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸರು ಇಬ್ಬರು ಯುವಕರನ್ನ ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.