ಕರ್ನಾಟಕ

karnataka

ETV Bharat / state

ಲಾರಿ ಪಲ್ಟಿ: ಲಕ್ಷಾಂತರ ಮೌಲ್ಯದ ಟೊಮ್ಯಾಟೊ ರಸ್ತೆ ಪಾಲು - ಕೋಲಾರದಲ್ಲಿ ನಾಲ್ಕು ಲಕ್ಷ ಮೌಲ್ಯದ ಟೊಮ್ಯಾಟೊ ರಸ್ತೆ ಪಾಲು

ಟೊಮ್ಯಾಟೊ ತುಂಬಿದ್ದ ಲಾರಿ ಪಲ್ಟಿಯಾಗಿರುವ ಘಟನೆ ಕೋಲಾರ ತಾಲೂಕಿನ  ‌ಸುಗಟೂರು ಬಳಿ ನಡೆದಿದೆ.

A lorry accident in kolar
ಟೊಮ್ಯಾಟೊ ತುಂಬಿದ್ದ ಲಾರಿ ಪಲ್ಟಿ

By

Published : Jan 2, 2020, 1:43 PM IST

ಕೋಲಾರ:ಟೊಮ್ಯಾಟೊ ತುಂಬಿದ್ದ ಲಾರಿ ಪಲ್ಟಿಯಾಗಿರುವ ಘಟನೆ ಕೋಲಾರ ತಾಲೂಕಿನ ‌ಸುಗಟೂರು ಬಳಿ ನಡೆದಿದೆ. ಘಟನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಟೊಮ್ಯಾಟೊ ರಸ್ತೆ ಪಾಲಾಗಿದ್ದು, ಅದೃಷ್ಟವಶಾತ್ ಚಾಲಕ ಹಾಗೂ ಕ್ಲೀನರ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೋಲಾರ ಎಪಿಎಂಸಿ ಮಾರುಕಟ್ಟೆಯ MBSM ಕಂಪನಿಯ ನದೀಮ್ ಎಂಬುವವರಿಗೆ ಸೇರಿದ ಅಂದಾಜು ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಟೊಮ್ಯಾಟೊ ಇದಾಗಿದ್ದು, ಎಪಿಎಂಸಿ ಮಾರುಕಟ್ಟೆಯಿಂದ ಉತ್ತರ‌ ಪ್ರದೇಶಕ್ಕೆ ಸಾಗಿಸಲಾಗುತ್ತಿತ್ತು.

ಟೊಮ್ಯಾಟೊ ತುಂಬಿದ್ದ ಲಾರಿ ಪಲ್ಟಿ

ಡ್ರೈವರ್ ಹಾಗೂ ಕ್ಲೀನರ್​ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾರಿ ಹಾಗೂ ಟೊಮ್ಯಾಟೊ ಬಾಕ್ಸ್​ಗಳು ಸೇರಿ ಸುಮಾರು ಹತ್ತು ಲಕ್ಷದಷ್ಟು ನಷ್ಟ ಉಂಟಾಗಿದ್ದು, ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details