ಕರ್ನಾಟಕ

karnataka

ETV Bharat / state

ಹೇಳದೆ ಮದುವೆಯಾದ ಪ್ರಿಯತಮ: ಸುಪಾರಿ ನೀಡಿ ಕೊಲೆ ಮಾಡಿಸಿದ್ಲು ಕೋಲಾರದ ವಿವಾಹಿತ ಪ್ರಾಂಶುಪಾಲೆ! - ಕೋಲಾರ ಜಬೀರ್​ ಕೊಲೆ ಸುದ್ದಿ

ಪ್ರಿಯಕರ ಬೇರೊಂದು ವಿವಾಹವಾದ ಎಂದು ಕೋಪಗೊಂಡ ಮಹಿಳೆ ಆತನನ್ನು ಕೊಲೆ ಮಾಡಲೆಂದು ಸುಪಾರಿ ನೀಡಿದ್ದಾಳೆ. ಕುಡಿಯುವ ಕಾಫಿಗೆ ನಿದ್ರೆ ಮಾತ್ರೆ ಹಾಕಿ, ಅವನು ಪ್ರಜ್ಞೆ ತಪ್ಪಿದ ಬಳಿಕ ಕೊಲೆ ಮಾಡಿ ಬೀದರ್​ ಬಳಿಯ ನಿಡುವಂಚಿ ಗ್ರಾಮದ ಬಳಿ ಮಣ್ಣಿನಲ್ಲಿ ಹೂತು ಹಾಕಿರುವುದು ತನಿಖೆ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

kolar
ಜಬೀರ್​

By

Published : Jul 11, 2021, 1:52 PM IST

Updated : Jul 11, 2021, 2:03 PM IST

ಕೋಲಾರ:ಪ್ರಿಯಕರ ಬೇರೆ ವಿವಾಹವಾದ ಎಂದು ಕೋಪಗೊಂಡ ಮಹಿಳೆ ಸುಪಾರಿ ನೀಡಿ ಆತನನ್ನು ಕೊಲೆ ಮಾಡಿಸಿರುವ ಘಟನೆ ನಡೆದಿದೆ. ಕೋಲಾರ ನಗರದ ಮಹಾಲಕ್ಷ್ಮಿ ಬಡಾವಣೆಯ ನಿವಾಸಿ ಜಬೀರ್ ಕೊಲೆಯಾದ ವ್ಯಕ್ತಿ. ಈತ ಬೇರೆ ರಾಜ್ಯಗಳಿಂದ ಕಾರುಗಳನ್ನು ಖರೀದಿಸಿ ತಂದು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದ.

ಜಬೀರ್​ ಕಳೆದ ಕೆಲವು ವರ್ಷಗಳಿಂದ ಅವನ ತಂದೆಯ ದೂರದ ಸಂಬಂಧಿ, ಖಾಸಗಿ ಶಾಲೆಯಲ್ಲಿ ಪ್ರಾಂಶುಪಾಲೆಯಾಗಿ ಕೆಲಸ ಮಾಡುತ್ತಿದ್ದ ಝಕಿಯಾ ಎಂಬ ವಿವಾಹಿತ ಮಹಿಳೆಯೊಂದಿಗೆ ಸಲುಗೆ ಹೊಂದಿದ್ದನಂತೆ. ಆದರೆ ಅದೇ ಸಲುಗೆ ಆತನ ಪ್ರಾಣಕ್ಕೆ ಕುತ್ತು ತಂದಿದೆ.

ಸುಪಾರಿ ನೀಡಿ ಕೊಲೆ ಮಾಡಿಸಿ ಝಾಕಿಯಾ

ಜಬೀರ್​, ಝಕಿಯಾ ಜೊತೆ ಸಲುಗೆಯಿಂದ ಇದ್ದಾಗಲೇ ಆಕೆಗೆ ತಿಳಿಯದಂತೆ ಬೇರೊಂದು ವಿವಾಹವಾಗಿದ್ದಾನೆ. ಇದರಿಂದ ಕೋಪಗೊಂಡ ಝಕಿಯಾ ಪ್ಲಾನ್​ ಮಾಡಿಕೊಂಡು ಮೇ 3 ರಂದು ಜಬೀರ್​ನನ್ನು ಹೈದರಾಬಾದ್​ಗೆ ಕಳುಹಿಸಿ ಅಲ್ಲಿ ನನಗೊಬ್ಬರು ಮೂರು ಲಕ್ಷ ಹಣ ಕೊಡ್ತಾರೆ. ಅದನ್ನು ತೆಗೆದುಕೊಂಡು ಬಾ. ಅದರಲ್ಲಿ ನೀನು ಸ್ವಲ್ಪ ಇಟ್ಕೊಂಡು ನನಗೆ ಸ್ವಲ್ಪ ಕೊಡು ಎಂದು ಹೇಳಿ ಕಳುಹಿಸಿದ್ದಾಳಂತೆ. ಆ ಹಿನ್ನೆಲೆ ಹೈದರಾಬಾದ್​ಗೆ ಹೋದ ಜಬೀರ್​ ನಿಗೂಢವಾಗಿ ಕಣ್ಮರೆಯಾಗಿದ್ದಾನೆ.

ಮದುವೆಯಾಗಿ ಒಂದು ತಿಂಗಳಾಗಿದ್ದ ಜಬೀರ್​ ಹೈದರಾಬಾದ್​ಗೆ ಹೋದವನು 22 ದಿನ ಕಳೆದರೂ ಪತ್ತೆಯಾಗಿರಲಿಲ್ಲ. ಈ ನಡುವೆ ಜಬೀರ್​ ಪೋಷಕರು ಗಲ್​ಪೇಟೆ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಸತ್ಯ ತಿಳಿದುಬಂದಿದೆ.

ನಾಪತ್ತೆಯಾಗಿದ್ದ ಜಬೀರ್​ನ ಕಾಲ್​ ಡಿಟೇಲ್ಸ್​ ತೆಗೆದ ನಂತರ, ಮೇ 4ರಂದು ಆತನೊಂದಿಗೆ ಝಕಿಯಾ ಮಾತನಾಡಿರುವುದು ತಿಳಿದಿದೆ. ಈ ಹಿನ್ನೆಲೆಯಲ್ಲಿ ಝಕಿಯಾಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ಘಟನೆಯ ಸಂಪೂರ್ಣ ಮಾಹಿತಿ ಹೊರಬಿದ್ದಿದೆ. ಜಬೀರ್​ ಕುಡಿಯುವ ಕಾಫಿಗೆ ನಿದ್ರೆ ಮಾತ್ರೆ ಹಾಕಿ, ಅವನು ಪ್ರಜ್ಞೆ ತಪ್ಪಿದ ಬಳಿಕ ಆತನನ್ನು ಕೊಲೆ ಮಾಡಿ ಬೀದರ್​ ಬಳಿಯ ನಿಡುವಂಚಿ ಗ್ರಾಮದ ಬಳಿ ಮಣ್ಣಿನಲ್ಲಿ ಹೂತು ಹಾಕಿರುವುದನ್ನು ಆರೋಪಿ ಬಾಯ್ಬಿಟ್ಟಿದ್ದಾಳೆ ಎನ್ನಲಾಗ್ತಿದೆ.

ಸದ್ಯ ಶವವನ್ನು ಹೊರತೆಗೆದ ಪೊಲೀಸರು ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ. ಝಕಿಯಾ ಸೇರಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

Last Updated : Jul 11, 2021, 2:03 PM IST

ABOUT THE AUTHOR

...view details