ಕೋಲಾರ: ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ದೇವಸ್ಥಾನಗಳಿಗೆ ಬೀಗ ಹಾಕಲಾಗಿದೆ. ಯಾವುದೇ ಶುಭ ಸಮಾರಂಭಗಳು ನಡೆಯುತ್ತಿಲ್ಲ. ಇದರಿಂದ ಹೂವಿಗೆ ಬೇಡಿಕೆಯಿಲ್ಲದಂತಾಗಿದೆ. ಹಾಗಾಗಿ, ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಕೂಟೇರಿ ಗ್ರಾಮದ ರೈತ ಅರುಣ್ ತಮ್ಮ ಕೈಯಾರೆ ಕಷ್ಟಪಟ್ಟು ಬೆಳೆದಿದ್ದ ಚೆಂಡು ಹೂವಿನ ಬೆಳೆಯನ್ನು ನಾಶ ಮಾಡುತ್ತಿದ್ದಾರೆ.
ಚೆಂಡು ಹೂವನ್ನು ಬಾಡಿಸಿದ ಕೊರೊನಾ; ಅರಳಿ ನಗುತ್ತಿದ್ದ ಪುಷ್ಪರಾಶಿ ಮಣ್ಣುಪಾಲು - A farmer destroyed flower crop in Kolar
ಹೀಗಿರುವಾಗ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಹೂವು ಬೆಳೆದಿದ್ದ ಚೆಂಡು ಹೂವಿನ ಬೆಳೆಯನ್ನು ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಕೂಟೇರಿ ಗ್ರಾಮದ ರೈತ ನಾಶ ಮಾಡುತ್ತಿದ್ದಾರೆ.
ಹೂವು ಮಾರಾಟ ಮಾಡಲಾಗದೆ ದನ-ಕರು, ಕುರಿ-ಮೇಕೆಗಳನ್ನು ಬಿಟ್ಟು ಮೇಯಿಸುತ್ತಿದ್ದಾರೆ. ಹೀಗೆ ಕೊರೊನಾದಿಂದ ರೈತರ ಪರಿಸ್ಥಿತಿ ನಿಜಕ್ಕೂ ದಾರುಣವಾಗಿದೆ. ಸುಮಾರು ಐದು ಎಕರೆ ಪ್ರದೇಶದಲ್ಲಿ ನಾಲ್ಕುವರೆ ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಚೆಂಡು ಹೂವು ಇಂದು ಕೊರೊನಾದಿಂದ ಕೇಳೋರಿಲ್ಲದಂತಾಗಿದೆ.
ಮಾರುಕಟ್ಟೆಯಲ್ಲೂ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕೊರೊನಾ ತುರ್ತುಪರಿಸ್ಥಿತಿ ಇಲ್ಲದೆ ಹೋಗಿದ್ರೆ ನಿಜಕ್ಕೂ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದ ರೈತ ಇಂದು ಸಾಲದ ಸುಳಿಗೆ ಸಿಲುಕುವ ಪರಿಸ್ಥಿತಿಗೆ ತಲುಪಿದ್ದಾನೆ. ಹಾಗಾಗಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂಬುದು ರೈತರ ಆಗ್ರಹ.