ಕರ್ನಾಟಕ

karnataka

ETV Bharat / state

ಕಾಲು-ಕೈಗೆ ಸರಪಳಿ ಹಾಕಿದ ಮಹಿಳೆ ರಸ್ತೆಯಲ್ಲಿ ಓಡಾಟ.. ವಶಕ್ಕೆ ಪಡೆದ ಪೊಲೀಸರು - ಮಹಿಳೆ ಕಾಲು ಕೈಗೆ ಸರಪಳಿ

ಸದ್ಯ ನಗರ ಎಸ್‌ಎನ್‌ಆರ್ ಆಸ್ಪತ್ರೆ ಮತ್ತು ಇತರೆಡೆ ಓಡಾಟ ನಡೆಸಿದ ಮಹಿಳೆಯನ್ನು ಪೊಲೀಸರು ತಮ್ಮ ವಶದಲ್ಲಿ ಇರಿಸಿಕೊಂಡಿದ್ದು, ಆಕೆಯ ಪೋಷಕರ ಬಳಿ ಬಿಡುವುದಾಗಿ ತಿಳಿಸಿದ್ದಾರೆ..

Fathima
ಫಾತಿಮಾ

By

Published : Nov 25, 2020, 7:53 PM IST

ಕೋಲಾರ:ಕಾಲು ಮತ್ತು ಕೈಗೆ ಕಬ್ಬಿಣದ ಸರಪಳಿ ಹಾಕಿದ ಮಹಿಳೆ ನಗರದ ಎಂಜಿ ರಸ್ತೆಯಲ್ಲಿ ಕಳೆದ ರಾತ್ರಿ ಓಡಾಟ ನಡೆಸಿದ್ದು, ಆಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಫಾತಿಮಾ

ಪೊಲೀಸರ ವಿಚಾರಣೆ ವೇಳೆ ಆಕೆ ನಾನು ಚಿಂತಾಮಣಿಯವಳಾಗಿದ್ದು, ಮಾನಸಿಕ ಅಸ್ವಸ್ಥೆಯಲ್ಲ. ಆದ್ರೂ ಕೂಡ ಆಸ್ತಿಗಾಗಿ ನನ್ನ ಕೈ-ಕಾಲಿಗೆ ಬೇಡಿ ಹಾಕಿ ಬೀಗ ಹಾಕಿದ್ದಾರೆ. ನನ್ನ ಹೆತ್ತವರೂ ಕೂಡ ನನ್ನನ್ನು ಸೇರಿಸೋದಿಲ್ಲ, ನನಗೆ ಭಯ ಆಗುತ್ತೆ. ಅಲ್ಲದೆ ನನಗೆ ದೆವ್ವ ಹಿಡಿದಿದೆ ಎಂದು ನನ್ನ ಗಂಡ ಈ ರೀತಿ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ‌.

ಸದ್ಯ ನಗರ ಎಸ್‌ಎನ್‌ಆರ್ ಆಸ್ಪತ್ರೆ ಮತ್ತು ಇತರೆಡೆ ಓಡಾಟ ನಡೆಸಿದ ಮಹಿಳೆಯನ್ನು ಪೊಲೀಸರು ತಮ್ಮ ವಶದಲ್ಲಿ ಇರಿಸಿಕೊಂಡಿದ್ದು, ಆಕೆಯ ಪೋಷಕರ ಬಳಿ ಬಿಡುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details