ಕರ್ನಾಟಕ

karnataka

ETV Bharat / state

6 ಮಂದಿ ಗರ್ಭಿಣಿಯರಿಗೆ ವಕ್ಕರಿಸಿದ್ದ ಕೊರೊನಾ... ನಾಲ್ವರು ಸೇಫ್​​, ಇಬ್ಬರಿಗೆ ಚಿಕಿತ್ಸೆ

ಕೋಲಾರದಲ್ಲಿ 6 ಮಂದಿ ಗರ್ಭಿಣಿಯರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ನಾಲ್ವರು ಗುಣಮುಖರಾಗಿದ್ದರೆ, ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

adies had corona
ಇಬ್ಬರಿಗೆ ಚಿಕಿತ್ಸೆ

By

Published : Jul 8, 2020, 12:11 AM IST

ಕೋಲಾರ:ಜಿಲ್ಲೆಯಲ್ಲಿ ಆರು ಮಂದಿ ಗರ್ಭಿಣಿಯರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ನಾಲ್ವರು ಗುಣಮುಖರಾಗಿದ್ದರೆ, ಮತ್ತಿಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೆ ಇದೆ. ಇದುವರೆಗೂ 197 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 4 ಜನ ಸಾವನ್ನಪ್ಪಿದ್ದಾರೆ. ಈ ಮಧ್ಯೆ ಕೋಲಾರದಲ್ಲಿ ಆರು ಜನ ಗರ್ಭಿಣಿಯರಲ್ಲಿ ಸೋಂಕು ಪತ್ತೆಯಾಗಿ ಸದ್ಯ ನಾಲ್ವರು ಗುಣಮುಖರಾಗಿದ್ದಾರೆ.

6ಮಂದಿ ಗರ್ಭಿಣಿಯರಿಗೆ ವಕ್ಕರಿಸಿದ್ದ ಕೊರೊನಾ.

ತಾಲ್ಲೂಕಿನ ಬೆಟ್ಟಹೊಸಪುರ ಗ್ರಾಮದ ಗರ್ಭಿಣಿ ಹಾಗೂ ಮುಳಬಾಗಲು ತಾಲ್ಲೂಕಿನ 22 ವರ್ಷದ ಗರ್ಭಿಣಿ ಕೊರೊನಾ ಮುಕ್ತರಾಗಿ ಮನೆಗೆ ವಾಪಸ್ ಆಗಿದ್ದಾರೆ. ಉಳಿದಂತೆ ಇಬ್ಬರು ಗರ್ಭಿಣಿಯರಿಗೆ ಹೆರಿಗೆ ಮಾಡಿಸಿ ವಿಶೇಷ ಕಾಳಜಿ ವಹಿಸಿ ಚಿಕಿತ್ಸೆ ನೀಡಿ ಬಿಡುಗಡೆ ಗೊಳಿಸಿ ಮನೆಗೆ ಕಳುಹಿಸಲಾಗಿದೆ. ಇನ್ನು ಆಸ್ಪತ್ರೆಯಲ್ಲಿ ಇಬ್ಬರು ಗರ್ಭಿಣಿಯರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನಾದಿಂದ ನಲುಗುತ್ತಿರುವ 60 ವರ್ಷ ಮೇಲ್ಪಟ್ಟವರು 13 ಜನರಿದ್ದು ಇವರೆಲ್ಲರನ್ನು ಗುಣಮುಖರನ್ನಾಗಿ ಮಾಡುವುದು ಸವಾಲಿನ ಕೆಲಸವಾಗಿದೆ. ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ 200 ಬೆಡ್​ಗಳನ್ನು ತಯಾರಿ ಮಾಡಿಕೊಂಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು, 10 ವೆಂಟಿಲೇಟರ್ ಹಾಗೂ ಸಿಬ್ಬಂದಿಗಳಿಗೆ ತರಬೇತಿ ನೀಡಿದ್ದಾರೆ. ಮತ್ತಷ್ಟು ಕೊರೊನಾ ಸೋಂಕಿತರು ದಾಖಲಾದ್ರು ಕೂಡ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸಜ್ಜಾಗಬೇಕಿದೆ.

ABOUT THE AUTHOR

...view details