ಕರ್ನಾಟಕ

karnataka

ETV Bharat / state

ಕೋಲಾರದಲ್ಲಿ ನೆತ್ತಿ ಸುಡುತ್ತಿದೆ ಬಿಸಿಲ ಧಗೆ: ಎಳನೀರು, ಕಲ್ಲಂಗಡಿ ಮೊರೆ ಹೋದ ಜನ - ಕೋಲಾರದಲ್ಲಿ ಹೆಚ್ಚಾಗುತ್ತಿರುವ ಬಿಸಿಲಿನ ತಾಪಮಾನ

ಈ ಬಾರಿಯ ಬಿರು ಬಿಸಿಲು ಜನರ ನೆತ್ತಿ ಸುಡುತ್ತಿದೆ. ಬಿಸಿಲಿನ ಧಗೆ ದಿನೇ ದಿನೆ ಹೆಚ್ಚಾಗುತ್ತಿದ್ದು ಜನರು ಮನೆಯಿಂದ ಹೊರಬರಲೂ ಯೋಚಿಸುವ ಪರಿಸ್ಥಿತಿ ಇದೆ. ಸೂರ್ಯನ ಪ್ರಖರ ಕಿರಣಗಳ ಹೊಡೆತ ತಾಳಲಾರದೆ ಜನರು ದಣಿವಾರಿಸಿಕೊಳ್ಳಲು ಎಳನೀರು, ಕಲ್ಲಂಗಡಿ, ತಂಪು ಪಾನೀಯಗಳ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ.

34-38 degree Temperature in the Kolar
ದಣಿವಾರಿಸಿಕೊಳ್ಳಲು ಎಳನೀರು, ಕಲ್ಲಂಗಡಿಗಳ ಮೊರೆ ಹೋದ ಜನರು

By

Published : Mar 29, 2022, 6:26 PM IST

ಕೋಲಾರ:ಜಿಲ್ಲೆಯಲ್ಲಿ ಈ ವರ್ಷ ಮಾರ್ಚ್​ ತಿಂಗಳಾರಂಭದಲ್ಲೇ ಬೇಸಿಗೆಯ ತೀವ್ರತೆ ಹೆಚ್ಚಾಗಿತ್ತು. ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಜಿಲ್ಲೆಯಲ್ಲಿ ಈ ಬಾರಿ ಅತಿಹೆಚ್ಚು ಅಂದರೆ, 34 ರಿಂದ 38 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.


ಜನರು ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಕಲ್ಲಂಗಡಿ, ಎಳನೀರು, ಮಜ್ಜಿಗೆಯಂತಹ ಪಾನೀಯಗಳತ್ತ ಮುಖ ಮಾಡಿದ್ದಾರೆ. ನಗರದೊಳಗೆ ಹಾಗೂ ಹೊರಗೆ ಎಲ್ಲೆಂದರಲ್ಲಿ ಕಲ್ಲಂಗಡಿ ಹಣ್ಣಿನ ಅಂಗಡಿಗಳು ಕಾಣಸಿಗುತ್ತಿವೆ. ಕಳೆದ ನವೆಂಬರ್‌ ತಿಂಗಳಲ್ಲಿ ಉತ್ತಮ ಮಳೆಯಾದ ಕಾರಣ ಜಿಲ್ಲೆಯ ಬಹುತೇಕ ಕೆರೆಗಳಲ್ಲಿ ಸೀವ ಜಲವಿದೆ. ಆದರೂ ಕೂಡ ತಾಪಪಾನ ಮಾತ್ರ ಹೇಳತೀರದಂತಾಗಿದೆ.

ಇದನ್ನೂ ಓದಿ:ಪ್ರವಾಸಿಗರಿಗೆ ಮುದ ನೀಡುವ ತುಂಗಭದ್ರಾ ನದಿಯಲ್ಲಿ ಸೃಷ್ಟಿಯಾಗುವ ಕಿರು ಜಲಪಾತಗಳು

ಕಳೆದ ಬಾರಿ ತಮಿಳುನಾಡು, ಆಂಧ್ರಪ್ರದೇಶದಿಂದ ಕಲ್ಲಂಗಡಿ ಹಣ್ಣುಗಳನ್ನು ತರಿಸಿಕೊಳ್ಳಬೇಕಿತ್ತು. ಈ ವರ್ಷ ಹೆಚ್ಚಿನ ರೈತರು ಜಿಲ್ಲೆಯಲ್ಲಿ ಉತ್ತಮ ಕಲ್ಲಂಗಡಿ ಬೆಳೆ ತೆಗೆದಿದ್ದು ಒಳ್ಳೆಯ ಬೆಲೆ ಸಿಗುತ್ತಿದೆ.

ABOUT THE AUTHOR

...view details