ಕರ್ನಾಟಕ

karnataka

ETV Bharat / state

ಕೋಲಾರ ಮೆಡಿಕಲ್ ಕಾಲೇಜ್​ನಲ್ಲಿ 30 ಕೋವಿಡ್​ ಕೇಸ್​​, ಒಮಿಕ್ರಾನ್​​ ಪರೀಕ್ಷೆಗೆ ಸ್ಯಾಂಪಲ್​ ರವಾನೆ - ಕೋಲಾರದ ಶ್ರೀ ದೇವರಾಜ ಅರಸು ವೈದ್ಯಕೀಯ ಕಾಲೇಜ್

ಕೋಲಾರದ ದೇವರಾಜ ಅರಸು ಮೆಡಿಕಲ್​​ ಕಾಲೇಜ್​ನಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ಕಾಲೇಜ್​ನ 30 ವಿದ್ಯಾರ್ಥಿಗಳಲ್ಲಿ ಕೋವಿಡ್ ದೃಢಗೊಂಡಿದೆ.

students tested covid positive
students tested covid positive

By

Published : Dec 25, 2021, 8:26 PM IST

ಕೋಲಾರ: ಕರ್ನಾಟಕದಲ್ಲಿ ಮೆಡಿಕಲ್​ ಕಾಲೇಜ್​ಗಳು ಇದೀಗ ಕೋವಿಡ್ ಹಾಟ್​​ಸ್ಪಾಟ್​ಗಳಾಗುತ್ತಿದ್ದು, ಧಾರವಾಡದ ಎಸ್​ಡಿಎಂ ಹಾಗೂ ಮಂಗಳೂರಿನ ಬಳಿಕ ಇದೀಗ ಕೋಲಾರದಲ್ಲಿರುವ ವೈದ್ಯಕೀಯ ಕಾಲೇಜ್​ನಲ್ಲೂ ಕೋವಿಡ್​​ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಕಾಲೇಜ್​ ಹಾಗೂ ಹಾಸ್ಟೇಲ್​ ಅನ್ನ ಕಂಟೋನ್ಮೆಂಟ್​​ ಝೋನ್​ ಎಂದು ಘೋಷಣೆ ಮಾಡಲಾಗಿದೆ.

ಕೋಲಾರದ ಶ್ರೀ ದೇವರಾಜ ಅರಸು ವೈದ್ಯಕೀಯ ಕಾಲೇಜ್​​ನಲ್ಲಿ ಕಳೆದ ನಾಲ್ಕು ದಿನಗಳಲ್ಲಿ 30 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದೀಗ ಅವರ ಸ್ಯಾಂಪಲ್​​ ಜಿನೋಮ್​ ಸೀಕ್ವೆನ್ಸಿಂಗ್​​​ಗೆ ಕಳುಹಿಸಿಕೊಡಲಾಗಿದೆ.

ದೇವರಾಜ ಅರಸು ವೈದ್ಯಕೀಯ ಕಾಲೇಜಿನ 1,160 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳನ್ನ ಕೋವಿಡ್ ಪರೀಕ್ಷೆಗೊಳಪಡಿಸಲಾಗಿದ್ದು, ಈ ವೇಳೆ, 30 ವಿದ್ಯಾರ್ಥಿಗಳಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಇವರನ್ನ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗ್ತಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿರಿ:U19 Asia Cup: ಪಾಕ್​ ವಿರುದ್ಧ ಲಾಸ್ಟ್​​ ಓವರ್​​ ಥ್ರಿಲ್ಲರ್​​ನಲ್ಲಿ 'ಗೆಲುವು' ಕೈಚೆಲ್ಲಿದ ಭಾರತ

ರಾಜ್ಯದಲ್ಲಿ ಇದೀಗ ಶೇ 0.35ರಷ್ಟು ದಷ್ಟು ಕೊರೊನಾ ಪಾಸಿಟಿವಿಟಿ ಇದ್ದು, 7,251 ಸಕ್ರಿಯ ಕೋವಿಡ್​​ ಪ್ರಕರಣಗಳಿವೆ. ಇಲ್ಲಿಯವರೆಗೆ 31 ಓಮಿಕ್ರಾನ್​ ಪ್ರಕರಣ ಪತ್ತೆಯಾಗಿದ್ದು, ಇದರಲ್ಲಿ 15 ಜನರು ಗುಣಮುಖರಾಗಿದ್ದಾರೆ.

ABOUT THE AUTHOR

...view details