ಕರ್ನಾಟಕ

karnataka

ETV Bharat / state

ನೆಲದಡಿ ಮುಚ್ಚಿಟ್ಟಿದ್ದ ಕೋಟಿ ರೂ. ಮೌಲ್ಯದ ಗಾಂಜಾ ಸೀಜ್​... ರೌಡಿ ತಂಗಂ ಸಹೋದರರೇ ಕಿಂಗ್​ ಪಿನ್​? - ಅಂತಾರಾಜ್ಯ ಗಾಂಜಾ ಮಾರಾಟಾಗಾರರ ಬಂಧನ

ಕೋಲಾರದ ಮಾರಿಕುಪ್ಪಂ ಪೊಲೀಸರು ಹಾಗು ಅಬಕಾರಿ ಅಧಿಕಾರಿಗಳು ಜಂಟಿ ದಾಳಿ ನಡೆಸಿ ಕೆಜಿಎಫ್ ನಗರದಲ್ಲಿ ಸುಮಾರು 1 ಕೋಟಿ ಮೌಲ್ಯದ 200 ಕೆ.ಜಿ. ಗಾಂಜಾ ಸೀಜ್​ ಮಾಡಿದ್ದಾರೆ.

200 kg ganja seized in kgf
ಗಾಂಜಾ ಪೊಲೀಸರ ವಶಕ್ಕೆ

By

Published : Sep 29, 2020, 8:54 PM IST

ಕೋಲಾರ:ಕೆಜಿಎಫ್ ನಗರದ ಕೃಷ್ಣಗಿರಿ ಲೈನ್‌ನಲ್ಲಿ ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಜಂಟಿ ಕಾರ್ಯಾಚರಣೆ ನಡೆಸಿದ್ದು, ನೆಲದಡಿ ಹೂತಿಡಲಾಗಿದ್ದ ಸುಮಾರು 200 ಕೆ.ಜಿ.ಯಷ್ಟು ಗಾಂಜಾ ವಶಕ್ಕೆ ಪಡೆದಿದ್ದಾರೆ.

ಕೆಜಿಎಫ್ ಎಸ್​​ಪಿ ಇಲಕ್ಕಿಯಾ ಕರುಣಾಗರನ್ ಹಾಗೂ ಕೋಲಾರ ಅಬಕಾರಿ ಡಿಸಿ ಚಂದ್ರಶೇಖರ್​ಗೆ ಬಂದ ಖಚಿತ ಮಾಹಿತಿ ಮೇರೆಗೆ ಮಾರಿಕುಪ್ಪಂ ಪೊಲೀಸರು ಹಾಗು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಸುಮಾರು ಒಂದು ಕೋಟಿಗೂ ಅಧಿಕ ಮೌಲ್ಯದ ಗಾಂಜಾ ಸೀಜ್​ ಮಾಡಲಾಗಿದೆ.

ಗಾಂಜಾ ಪೊಲೀಸರ ವಶಕ್ಕೆ

ಗಾಂಜಾ ಸಾಗಾಣಿಕೆ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸುತ್ತಿರುವ ಕೆಜಿಎಫ್ ಪೊಲೀಸರು ಅಂತಾರಾಜ್ಯ ಗಾಂಜಾ ಮಾಫಿಯಾವನ್ನು ಭೇದಿಸಿದ್ದಾರೆ. ಈ ಖದೀಮರು ಭೂಮಿಯಲ್ಲಿ ಗುಂಡಿ ತೆಗೆದು ಅದರಲ್ಲಿ ಗಾಂಜಾ ಮುಚ್ಚಿಟ್ಟಿದ್ದರು. ಇದನ್ನು ಆರೋಪಿಗಳಿಂದ ಬಾಯಿಬಿಡಿಸಿ ವಶಕ್ಕೆ ಪಡೆಯಲಾಗಿದೆ, ಮಾತ್ರವಲ್ಲದೆ ಮನೆಯ ಕಾಂಪೌಂಡ್​ ಒಳಗೆ ಬೆಳೆದಿದ್ದ ಗಾಂಜಾ ಗಿಡಗಳನ್ನು ಸಹ ವಶಕ್ಕೆ ಪಡೆದು ಆರೋಪಿಗಳ ವಿಚಾರಣೆ ಕೈಗೊಂಡಿದ್ದಾರೆ.

ಒಂದು ಕಾಲದಲ್ಲಿ ಕೆಜಿಎಫ್‌ಅನ್ನು ರೌಡಿಸಂ ಹೆಸರಲ್ಲಿ ನಡುಗಿಸಿದ್ದ ರೌಡಿ ತಂಗಂ ಸೋದರರೇ ಇದರ ಕಿಂಗ್‌ಪಿನ್ ಎನ್ನಲಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ 186 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿತ್ತು, ಈಗ ಅದೇ ಜೋಸೆಫ್ ಹಾಗೂ ಪಲ್ಲರಾಜ್ ಈ ಪ್ರಕರಣದ ಕಿಂಗ್​​ಪಿನ್​ಗಳಾಗಿದ್ದು, ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಎರಡೂವರೆ ದಶಕಗಳಿಂದ ಹಲವಾರು ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಇವರು ಈಗ ಮತ್ತೆ, ಗಾಂಜಾ ದಂಧೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ABOUT THE AUTHOR

...view details