ಕರ್ನಾಟಕ

karnataka

ETV Bharat / state

ಗಲಾಟೆ ಬಿಡಿಸಲು ಬಂದ ಪೊಲೀಸರ ಮೇಲೆ ಹಲ್ಲೆ : 2 ಗುಂಪಿನ 16 ಮಂದಿ ಬಂಧನ - ಪೊಲೀಸರ ಮೇಲೆ ಹಲ್ಲೆ

ಗಲಾಟೆ ಬಿಡಿಸಲು ಬಂದ ಪೊಲೀಸರ ಮೇಲೆ ಎರಡೂ ಗುಂಪಿನವರು ಹಲ್ಲೆ ನಡೆಸಿದ್ದಲ್ಲದೆ, ಪೊಲೀಸರ ಗಸ್ತು ವಾಹನದ ಗ್ಲಾಸ್ ಒಡೆದು ಹಾಕಿದ್ದಾರೆ. ಘಟನೆಯಲ್ಲಿ ಎಎಸ್​​​ಐ ರಮೇಶ್ ಹಾಗೂ ಕಾನ್ಸ್‌ಟೇಬಲ್ ಮಂಜುನಾಥ್ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ..

2-group-of-people-attacked-police-in-kolar
ಗಲಾಟೆ ಬಿಡಿಸಲು ಬಂದ ಪೊಲೀಸರ ಮೇಲೆ ಹಲ್ಲೆ

By

Published : Mar 15, 2021, 8:03 PM IST

ಕೋಲಾರ :ಎರಡು ಗುಂಪುಗಳ ಮಧ್ಯೆ ನಡೆಯುತ್ತಿದ್ದ ಜಗಳವನ್ನು ಬಿಡಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ, ಪೊಲೀಸ್ ವಾಹನವನ್ನು ಜಖಂಗೊಳಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕಪ್ಪಲಮಡುಗು ಗ್ರಾಮದ ಬಳಿ ಕಳೆದ ತಡರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಹೆದ್ದಾರಿ 75ರ ಕಪ್ಪಲಮಡುಗು ಗ್ರಾಮದ ಬಳಿ ಕಳೆದ ರಾತ್ರಿ, ಪ್ರೋಟ್ಯಾಕ್ ಚಿಕನ್ ಮಾರ್ಕೇಟ್ ಕೂಲಿ ಕಾರ್ಮಿಕರ ಎರಡು ಗುಂಪುಗಳ ನಡುವೆ ಜಗಳ ನಡೆಯುತ್ತಿತ್ತು.

ಈ ವೇಳೆ ಹೆದ್ದಾರಿ ಗಸ್ತು ತಿರುಗುತ್ತಿದ್ದ ಮುಳಬಾಗಿಲು ಪೊಲೀಸರು ಜಗಳ ಬಿಡಿಸಲು ಮುಂದಾದ ವೇಳೆ ಹಲ್ಲೆ ನಡೆದಿದೆ. ಗಲಾಟೆ ಬಿಡಿಸಲು ಬಂದ ಪೊಲೀಸರ ಮೇಲೆ ಎರಡೂ ಗುಂಪಿನವರು ಹಲ್ಲೆ ನಡೆಸಿದ್ದಲ್ಲದೆ, ಪೊಲೀಸರ ಗಸ್ತು ವಾಹನದ ಗ್ಲಾಸ್ ಒಡೆದು ಹಾಕಿದ್ದಾರೆ.

ಘಟನೆಯಲ್ಲಿ ಎಎಸ್​​​ಐ ರಮೇಶ್ ಹಾಗೂ ಕಾನ್ಸ್‌ಟೇಬಲ್ ಮಂಜುನಾಥ್ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಸುಮಾರು 16 ಜನರನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಪ್ರಿಯಕರ ಜತೆ ಸೇರಿ ಗಂಡನನ್ನು ಕೊಲೆ ಮಾಡಿದ ಹೆಂಡತಿ.. ಎಂಥಾ ಕಥೆ ಕಟ್ಟಿದ್ದಳು ಅಂದ್ರೇ..

ABOUT THE AUTHOR

...view details