ಕೋಲಾರ :ಪ್ರತಿಷ್ಟಿತ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಮಾರು 11 ಸಾವಿರ ಪುಟಗಳ ಚಾರ್ಚ್‌ಶೀಟ್‌ನ ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಇಂದು ಕೋಲಾರದ ಹೋಂಡಾ ಕಂಪನಿಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಸ್ಟ್ರಾನ್ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಎಎಸ್ಪಿಗಳು ತನಿಖೆ ನಡೆಸಿದ್ದಾರೆ. ಹನ್ನೊಂದು ಸಾವಿರ ಪುಟಗಳ ಚಾರ್ಜ್‌ಶೀಟ್‌ನ ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ಹೇಳಿದರು.
ವಿಸ್ಟ್ರಾನ್ ಕಂಪನಿಯಲ್ಲಿ ದಾಂಧಲೆ ಪ್ರಕರಣದಲ್ಲಿ 11 ಸಾವಿರ ಪುಟಗಳ ಚಾರ್ಚ್‌ಶೀಟ್ ಸಲ್ಲಿಕೆ ವಿಸ್ಟ್ರಾನ್ ದಾಂಧಲೆ ಪ್ರಕರಣದ ತನಿಖೆಯಲ್ಲಿ ಕಂಡು ಬಂದಂತೆ, ವೇತನ, ಓಟಿ ವೇತನ ಸೇರಿದಂತೆ ಹಾಜರಾತಿ ಸಿಸ್ಟಮ್ನಲ್ಲಿ ಸಮಸ್ಯೆ ಇದ್ದ ಪರಿಣಾಮ, ಕಂಪನಿಯಲ್ಲಿ ಗಲಾಟೆ ಆಗಲು ಕಾರಣವಾಗಿದೆ ಎಂದರು.
ಅಲ್ಲದೇ ದಾಂಧಲೆಗೆ, ಹೊರಗಡೆಯಿಂದ ಯಾವುದೇ ಕುಮ್ಮಕ್ಕು ಇಲ್ಲ ಎನ್ನುವುದು ನಮ್ಮ ತನಿಖೆಯಿಂದ ಕಂಡು ಬಂದಿದೆ ಎಂದು ತಿಳಿಸಿದರು. ಇನ್ನು, 170 ಜನರನ್ನ ಬಂಧಿಸಿದ್ದು, 30 ಜನರನ್ನ ಜೈಲಿಗೆ ಕಳುಹಿಸಲಾಗಿದೆ, ಜೊತೆಗೆ ನಾಲ್ವರು ಬೇಲ್ ಪಡೆದಿದ್ದಾರೆಂದರು.