ಕೊಡಗು:ಬೆಂಗಳೂರಿನ ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಶಾಸಕ ಜಮೀರ್ ಅಹಮದ್ ನೇರ ಹೊಣೆಯಾಗಿದ್ದು ಅವರನ್ನು ಕೂಡಲೇ ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಆಗ್ರಹಿಸಿದ್ದಾರೆ.
ಜಮೀರ್ ಅಹಮದ್ ಬಂಧಿಸಿ ಜೈಲಿಗೆ ಕಳಿಸಿ: ಕೆ.ಜಿ.ಬೋಪಯ್ಯ ಆಗ್ರಹ - ಬೆಂಗಳೂರಿನ ಪಾದರಾಯನಪುರ ಗಲಾಟೆ ಪ್ರಕರಣ
ಬೆಂಗಳೂರಿನ ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಶಾಸಕ ಜಮೀರ್ ಅಹಮದ್ ನೇರ ಹೊಣೆಯಾಗಿದ್ದಾರೆ. ಇದೊಂದು ಪೂರ್ವ ನಿಯೋಜಿತ ಪ್ರಕರಣ, ಅವರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಕಿಡಿಕಾರಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಶಾಸಕ ಜಮೀರ್ ಅಹಮದ್ ನೇರ ಹೊಣೆ. ಇದೊಂದು ಪೂರ್ವ ನಿಯೋಜಿತ ಪ್ರಕರಣ.ಅವರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದಿದ್ದಾರೆ.
ನಿನ್ನೆ ಐದುನೂರಕ್ಕೂ ಹೆಚ್ಚು ಜನರು ಒಮ್ಮೆಲೆ ಹಲ್ಲೆಗೆ ಮುಂದಾಗಿದ್ದು, ಇದು ಪೂರ್ವ ನಿಯೋಜಿತ ಕೃತ್ಯ. ಕೋಮು-ದ್ವೇಷದ ರೀತಿ ಆಗುತ್ತದೆ ಎಂದು ಸರ್ಕಾರ ಮೃದುಧೋರಣೆ ತಾಳಿದೆ. ಸರ್ಕಾರ ಯಾವುದೇ ಕಾರಣಕ್ಕೂ ಇಂತವರನ್ನು ಸುಮ್ಮನೆ ಬಿಡಬಾರದು. ಹೀಗೆ ಮುಂದುವರೆದರೆ ಯಾವ ಅಧಿಕಾರಿಯೂ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಒತ್ತಾಯಿಸಿದ್ದಾರೆ.