ಕೊಡಗು:ದುಬೈನಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಮಡಿಕೇರಿಗೆ ಬಂದಿರುವ ವ್ಯಕ್ತಿಯಲ್ಲಿ ಜತೆ ತಾವು ಬಸ್ನಲ್ಲಿ ಪ್ರಯಾಣ ಮಾಡಿದ್ದಾಗಿ ಯುವತಿಯೋರ್ವಳು ಒಪ್ಪಿಕೊಂಡಿದ್ದಾಳೆ.
ಕೊರೊನಾ ಪೀಡಿತನ ಜೊತೆ ಪ್ರಯಾಣ... ಸ್ವಯಂ ಪ್ರೇರಿತವಾಗಿ ಒಪ್ಪಿಕೊಂಡ ಯುವತಿ - ಕೊರೊನಾ ಪೀಡಿತ ವ್ಯಕ್ತಿ ಜೊತೆ ಯುವತಿ ಒಬ್ಬಳು ಬಸ್ನಲ್ಲಿ ಪ್ರಯಾಣ
ಕೊಡಗು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಂಕಿತ ವ್ಯಕ್ತಿ ಜೊತೆ ಯುವತಿಯೋರ್ವಳು ಬಸ್ನಲ್ಲಿ ಪ್ರಯಾಣಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ.

ಕೊರೊನಾ
ಮಡಿಕೇರಿ ನಗರದಲ್ಲಿ ಯುವತಿ ಗುರುತು ಪತ್ತೆಯಾಗಿದ್ದು, ಸ್ವಯಂ ಪ್ರೇರಿತವಾಗಿ ಆರೋಗ್ಯ ಇಲಾಖೆಗೆ ಕರೆ ಮಾಡಿರುವ ಯುವತಿ ತಾನೂ ಸೋಂಕಿತ ವ್ಯಕ್ತಿ ಜೊತೆ ಪ್ರಯಾಣ ಬೆಳೆಸಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಸಿಬ್ಬಂದಿ ಯುವತಿಯನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಕೆಗೆ ವೈರಸ್‌ನ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎನ್ನಲಾಗಿದ್ದರೂ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲೇ ಇರಿಸುವಂತೆ ಜಿಲ್ಲಾ ಆರೋಗ್ಯ ಅಧಿಕಾರಿ ಸೂಚಿಸಿದ್ದಾರೆ ಎನ್ನಲಾಗಿದೆ.