ವಿರಾಜಪೇಟೆ (ಕೊಡಗು) :ಕಾವೇರಿ ನದಿ ಸೇತುವೆ ಮೇಲಿಂದ ಜಿಗಿದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ: ಸ್ಥಳೀಯ ಯುವಕರಿಂದ ರಕ್ಷಣೆ - ಬಲಮುರಿಯಲ್ಲಿ ಮಹಿಳೆ ಆತ್ಮಹತ್ಯೆಗೆ ಯತ್ನ
ಕಾವೇರಿ ನದಿಯ ಬಲಮುರಿ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರನ್ನು ಸ್ಥಳೀಯ ಯುವಕರು ರಕ್ಷಣೆ ಮಾಡಿದ್ದಾರೆ.
ಬಲಮುರಿ ಸೇತುವೆ ಬಳಿ ಬಂದ ಮಹಿಳೆ ಯಾರೂ ಇಲ್ಲದಿರುವುದನ್ನು ಗಮನಿಸಿ ಕಾವೇರಿ ನದಿಗೆ ಜಿಗಿಯಲು ಮುಂದಾಗುತ್ತಿದ್ದಂತೆ ಆಟೋ ಒಂದು ಬಂದು ಅಡ್ಡಿಪಡಿಸಿದೆ. ಆಟೋ ಅಲ್ಲಿಂದ ತೆರಳುತ್ತಿದಂತೆ ದೇವರಿಗೆ ಕೈಮುಗಿದು ಮಹಿಳೆ ನೀರಿಗೆ ಜಿಗಿದಿದ್ದಾಳೆ. ಮಹಿಳೆ ಸೇತುವೆ ಮೇಲೆ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ಸ್ಥಳೀಯ ಯುವಕರು ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿದ್ದರು. ಈ ವೇಳೆ ನೋಡ ನೋಡುತ್ತಿದ್ದಂತೆ ಮಹಿಳೆ ಸೇತುವೆಯಿಂದ ಜಿಗಿದಿದ್ದಾಳೆ. ತಕ್ಷಣ ಕಾರ್ಯಪ್ರವೃತ್ತರಾದ ಯುವಕರು ನದಿಗೆ ಹಾರಿ ಮಹಿಳೆಯನ್ನು ರಕ್ಷಿಸಿದ್ದಾರೆ.
ಸದ್ಯ ಮಹಿಳೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಹಿಳೆಯ ಮಾಹಿತಿ ಮತ್ತು ಯಾಕೆ ಆತ್ಮಹತ್ಯೆಗೆ ಯತ್ನಿಸಿದಳು ಎಂಬುವುದು ತಿಳಿದು ಬಂದಿಲ್ಲ.