ಕೊಡಗು ವೈನ್ ಹಾಗೂ ಫಲ ಪುಷ್ಪ ಪ್ರದರ್ಶನದ ಕುರಿತು ಮಾಹಿತಿ ನೀಡಿದ ಡಿಸಿ ಕೊಡಗು: ಕೋವಿಡ್ 19 ಕಾರಣದಿಂದಾಗಿ ಕಳೆದ ಮೂರು ವರ್ಷಗಳಿಂದ ಕೊಡಗಿನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಬ್ರೇಕ್ ಬಿದ್ದಿತ್ತು. ಆದ್ರೆ ಈಗ ಕೊರೊನಾ ವೈರಸ್ ಹಾವಳಿ ಕಡಿಮೆಯಾಗಿದ್ದು ಮುಂದಿನ ತಿಂಗಳ ಫೆ. 3ನೇ ತಾರೀಖಿನಿಂದ 6ರ ವರೆಗೆ ನಾಲ್ಕು ದಿನಗಳ ಕಾಲ ಮಡಿಕೇರಿಯ ರಾಜಾಸೀಟ್ನಲ್ಲಿ ಫಲಪುಷ್ಪ ಪ್ರದರ್ಶನ ಹಾಗೂ ಗಾಂಧಿ ಮೈದಾನದಲ್ಲಿ ವೈನ್ ಮೇಳ ಆಯೋಜಿಸಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಡಾ. ಬಿ ಸಿ ಸತೀಶ್ ತಿಳಿಸಿದರು.
ಈ ಕುರಿತು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಬಾರಿಯ ಫಲಪುಷ್ಪ ಪ್ರದರ್ಶನಲ್ಲಿ ಕೊಡಗಿನ ರಾಜರ ಕಾಲದ ನಾಲ್ಕು ನಾಡು ಅರಮನೆ ಹೈಲೈಟ್ ಆಗಿರಲಿದೆ. ಮುಂಬರುವ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ಮತದಾರರಿಗೆ ಅರಿವು ಮೂಡಿಸುವ ಉದ್ದೇಶದಿಂದ ಬ್ಯಾಲೆಟ್ ಪ್ಯಾಟ್, ವಿವಿ ಪ್ಯಾಡ್ನಿಂದಲೂ ಕಲಾಕೃತಿಗಳನ್ನ ನಿರ್ಮಾಣ ಮಾಡಲಾಗುವುದು ಎಂದರು ಹೇಳಿದರು.
ಕೊಡಗು ಜಿಲ್ಲೆಯು ಕಾಫಿಗೆ ಹೆಸರಾಗಿರುವುದರಿಂದ ಕಾಫಿಯನ್ನು ಪ್ರತಿಬಿಂಬಿಸುವ ಕಾಫಿ ಕಪ್ ಹಾಗೂ ಸಾಸರ್ಗಳು ಆಕರ್ಷಣೆಯಾಗಲಿದೆ. ಮಕ್ಕಳನ್ನು ಕೂಡ ಆಕರ್ಷಿಸಲು ಸ್ಪೈಡರ್ ಮ್ಯಾನ್, ಮಾಶಾ ಅಂಡ್ ಬಿಯರ್, ಫೋಟೋ ಪ್ರೇಮ್ ಸೇರಿದಂತೆ ವಿವಿಧ ಬಗೆಯ ಕಲಾಕೃತಿಗಳು ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಕಂಡುಬರಲಿದೆ. ಅಲ್ಲದೇ, ಹಣ್ಣು ಮತ್ತು ತರಕಾರಿಗಳಿಂದಲೂ ಕಲಾಕೃತಿಗಳು ಮೂಡಿಬರಲಿದೆ ಎಂದರು.
ಇದನ್ನೂ ಓದಿ:ಲಾಲ್‌ಬಾಗ್ ಫ್ಲವರ್ ಶೋಗೆ ಸಿಎಂ ಬೊಮ್ಮಾಯಿ ಚಾಲನೆ; ಈ ಬಾರಿ ಬೆಂಗಳೂರು ಇತಿಹಾಸದ ಥೀಮ್
ವೈನ್ ಮೇಳವನ್ನು ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ. ಹೀಗಾಗಿ, 60 ಮಳಿಗೆಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ 20 ಮಳಿಗೆಯನ್ನ ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ ಸೇರಿದಂತೆ ಇತರೆ ಇಲಾಖೆಗಳಿಗೆ ಮೀಸಲಿರಸಲಾಗಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಹದಿನೈದು ಸಾವಿರ ಜನ ಸೇರುವ ನಿರೀಕ್ಷೆ ಇದ್ದು, ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗುವುದೆಂದು ಬಿ.ಸಿ ಸತೀಶ ತಿಳಿಸಿದರು.
ಇದನ್ನೂ ಓದಿ:ವಿಜಯಪುರದಲ್ಲಿ ಫಲಪುಷ್ಪ ಪ್ರದರ್ಶನ: ಮನಸೆಳೆದ ಸಿದ್ದೇಶ್ವರ ಶ್ರೀಗಳ ಪ್ರತಿಕೃತಿ
ಬೆಂಗಳೂರಿನಲ್ಲಿ ನಡೆದ ಫಲಪುಷ್ಪ ಪ್ರದರ್ಶನ: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಕಳೆದ ಜನವರಿ 20 ರಿಂದ 11 ದಿನಗಳ ಕಾಲ ಬೆಂಗಳೂರಿನ ಲಾಲ್ಬಾಗ್ನ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿತ್ತು. ಫ್ಲವರ್ ಶೋನಲ್ಲಿ ಲಾಲ್ ಬಾಗ್, ದೊಡ್ಡಸಾಗನಕೆರೆ ಬೊಟಾನಿಕಲ್ ಗಾರ್ಡನ್, ನಂದಿ ಗಿರಿಧಾಮ, ಕೆಮ್ಮಣ್ಣುಗುಂಡಿ ಹಾಗೂ ಊಟಿಯ ಪ್ರತಿಕೃತಿಯನ್ನು ಹೂವಿನಲ್ಲಿ ಸುಂದರವಾಗಿ ಚಿತ್ರಿಸಲಾಗಿತ್ತು. ಜೊತೆಗೆ ಸ್ವಚ್ಛತೆ ಕಾಪಾಡಲು ಉದ್ಯಾನದಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿತ್ತು. ಕಳೆದ ವರ್ಷದಂತೆ ಈ ವರ್ಷ ಸಹ ಮಕ್ಕಳಿಗೆ 30 ರೂ. ಮತ್ತು ವಯಸ್ಕರಿಗೆ 70 ರೂ. ಟಿಕೆಟ್ ನಿಗದಿ ಮಾಡಲಾಗಿತ್ತು. ಯೂನಿಫಾರ್ಮ್, ಐಡಿ ಕಾರ್ಡ್ ಹಾಕಿ ಬರುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗಿತ್ತು.
ಇದನ್ನೂ ಓದಿ:ಕೊಪ್ಪಳ ಜಾತ್ರೆಯಲ್ಲಿ ಜನರ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ... ಹರಿದು ಬಂದ ಭಕ್ತಸಾಗರ!