ಕೊಡಗು: ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭವಾಗಿದ್ದು, ರಾತ್ರಿಯಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ.
ಕೊಡಗಿನಲ್ಲಿ ಗಾಳಿ,ಮಳೆ: ರೈತರ ಮೊಗದಲ್ಲಿ ಉಲ್ಲಾಸ, ಕೃಷಿ ಚಟುವಟಿಕೆ ಚುರುಕು - ಕೊಡಗು ರೈತರ ಮೋಗದಲ್ಲಿ ಮಂದಹಾಸ ಸುದ್ದಿ
ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬ್ರಹ್ಮಗಿರಿ ತಪ್ಪಲು, ಪುಷ್ಪಗಿರಿ, ಭಾಗಮಂಡಲ, ತಲಕಾವೇರಿ, ನಾಪೋಕ್ಲು ಹಾಗೂ ವಿರಾಜಪೇಟೆ ಭಾಗದಲ್ಲಿ ಮಳೆ ಬಿರುಸು ಪಡೆದುಕೊಂಡಿದೆ.
![ಕೊಡಗಿನಲ್ಲಿ ಗಾಳಿ,ಮಳೆ: ರೈತರ ಮೊಗದಲ್ಲಿ ಉಲ್ಲಾಸ, ಕೃಷಿ ಚಟುವಟಿಕೆ ಚುರುಕು ಕೊಡಗು ಜಿಲ್ಲೆಯಲ್ಲಿ ಗಾಳಿ-ಮಳೆ](https://etvbharatimages.akamaized.net/etvbharat/prod-images/768-512-7609733-662-7609733-1592112646639.jpg)
ಕೊಡಗು ಜಿಲ್ಲೆಯಲ್ಲಿ ಗಾಳಿ-ಮಳೆ
ಕೊಡಗಿಗೆ ಮುಂಗಾರು ಮಳೆ ಸಿಂಚನ
ಓದಿ:ಕೊಡಗು ಜಿಲ್ಲೆಯಲ್ಲಿ ದಿಢೀರನೆ ಜೋರು ಗಾಳಿ-ಮಳೆ.. ಮಂಜಿನಿಂದ ಕೂಡಿದ ಈ ದೃಶ್ಯ ಮನಮೋಹಕ..
ರಾತ್ರಿಯಿಡೀ ಬಿಡುವು ಕೊಟ್ಟು ಸುರಿಯುತ್ತಿರುವ ಗಾಳಿ-ಮಳೆಗೆ ಕೊಡಗು ಅಕ್ಷರಶಃ ಮಂಜುಗಡ್ಡೆಯಂತಾಗಿದೆ. ಮಳೆ ಹಿನ್ನೆಲೆಯಲ್ಲಿ ಕಾವೇರಿಯಲ್ಲೂ ನೀರಿನ ಹರಿವು ಹೆಚ್ಚಿದೆ. ಅಲ್ಲದೆ ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿಗೂ ನೀರಿನ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಹಾಗೆಯೇ, ಕೃಷಿ ಚಟುವಟಿಕೆಗಳು ಗರಿಗೆದರಿದ್ದು ರೈತರಲ್ಲೂ ಉತ್ಸಾಹ ಮೂಡಿಸಿದೆ.