ಕರ್ನಾಟಕ

karnataka

ETV Bharat / state

ಕಾಫಿ ತೋಟದಲ್ಲಿ ಕಾಡು ಕುರಿ ಬೇಟೆಯಾಡಿದ್ದ ವ್ಯಕ್ತಿ... ಮಾಂಸದೂಟ ಸಿದ್ಧವಾಗುವಷ್ಟರಲ್ಲಿ ​ಅರೆಸ್ಟ್​ - kannada news

ಕಾಫಿ ತೋಟದಲ್ಲಿ ಉರುಳು ಹಾಕಿ ಕಾಡುಕುರಿ ಬೇಟೆಯಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ತಿನ್ನುವ ಆಸೆಯಿಂದ ಬೇಟೆಯಾಡಿ, ಅಡುಗೆ ಸಿದ್ಧ ಪಡಿಸುತ್ತಿರುವಾಗ ವಿಷಯ ತಿಳಿದ ಪೊಲೀಸರು ದಾಳಿ ಮಾಡಿದ್ದಾರೆ.

ಕಾಡು ಕುರಿ ಬೇಟೆಯಾಡಿದ ವ್ಯಕ್ತಿಯ ಬಂಧನ

By

Published : Jun 25, 2019, 1:06 PM IST

ಮಡಿಕೇರಿ: ಕಾಡುಕುರಿಯನ್ನು ಬೇಟೆಯಾಡಿದ್ದ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಹೆಬೆಟ್ಟಗೇರಿ ನಿವಾಸಿ ಅಪ್ಪಣ್ಣ (56) ಬಂಧಿತ ಆರೋಪಿ.

ಕಾಡು ಕುರಿ ಬೇಟೆಯಾಡಿದ್ದ ವ್ಯಕ್ತಿಯ ಬಂಧನ

ಅಪ್ಪಣ್ಣ ಕಾಫಿ ತೋಟದಲ್ಲಿ ಉರುಳು ಹಾಕಿ ಕಾಡುಕುರಿ ಬೇಟೆಯಾಡಿದ್ದ ಎನ್ನಲಾಗ್ತಿದೆ. ತಿನ್ನುವ ಆಸೆಯಿಂದ ಬೇಟೆಯಾಡಿ, ಅಡುಗೆ ಸಿದ್ಧ ಪಡಿಸುತ್ತಿರುವಾಗ ವಿಷಯ ತಿಳಿದ ಪೊಲೀಸರು ದಾಳಿ ಮಾಡಿ 6 ಕೆ.ಜಿ ಬೇಯಿಸಿದ ಮಾಂಸ ಮತ್ತು ಉರುಳು, ಮಚ್ಚನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಅರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ABOUT THE AUTHOR

...view details