ಕರ್ನಾಟಕ

karnataka

ETV Bharat / state

ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಬದುಕಿ ಉಳಿಯದ ಕಾಡುಕೋಣ..

ಗಂಭೀರವಾಗಿ ಗಾಯಗೊಂಡು ನಿತ್ರಾಣದಲ್ಲಿದ್ದ ಕಾಡು ಕೋಣವನ್ನು ರಕ್ಷಿಸಲು ಅರಣ್ಯ ಇಲಾಖೆ ನಡೆಸಿದ ಕಾರ್ಯಾಚಾರಣೆ ವಿಫಲಗೊಂಡಿದ್ದು, ಕೋಣ ಸಾವನ್ನಪ್ಪಿದೆ.

By

Published : May 1, 2020, 10:13 AM IST

wild-buffalo-dead-in-virajapete-badaga-village
ಕಾಡು ಕೋಣ

ವಿರಾಜಪೇಟೆ :ತಾಲೂಕಿನ ಕೆ. ಬಾಡಗ ಗ್ರಾಮದಲ್ಲಿ ಗಾಯಗೊಂಡು ನಿತ್ರಾಣದಲ್ಲಿದ್ದ ಕಾಡುಕೋಣ ರಕ್ಷಣೆಗಾಗಿ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆ ವಿಫಲಗೊಂಡಿದೆ.

ಗ್ರಾಮದ ಪೇರ್ಮಾಡು ಶ್ರೀ ಈಶ್ವರ ದೇವಸ್ಥಾನ ಸಮೀಪದ ಪೆಮ್ಮಣಮಾಡ ನವೀನ್​ ಎಂಬುವರ ತೋಟದಲ್ಲಿ ಸುಮಾರು 5 ವರ್ಷದ ಕಾಡು ಕೋಣ ಪತ್ತೆಯಾಗಿತ್ತು. ಕೋಣದ ಕಾಲಿನ ಭಾಗದಲ್ಲಿ ಗಂಭೀರ ಗಾಯಗಳಾಗಿದ್ವು. ಇದರಿಂದ ಕೊಳೆತು ದುರ್ವಾಸನೆ ಬೀರುತ್ತಿತ್ತು. ಆದರೆ, ಗಾಯಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ.

ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಬದುಕಿ ಉಳಿಯದ ಕಾಡುಕೋಣ..

ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಮೈಸೂರು ಮೃಗಾಲಯಕ್ಕೆ ಕೊಂಡೊಯ್ಯಲು ಕಾರ್ಯಾಚರಣೆ ಪ್ರಾರಂಭಿಸಿದ್ದರು. ಅರವಳಿಕೆ ನೀಡಿ ಹಿಡಿಯಲು ಮುಂದಾದಾಗ, ಕೋಣ ಆಯ ತಪ್ಪಿ ಗುಂಡಿಗೆ ಬಿದ್ದಿತ್ತು. ಇದರಿಂದ ಕಾರ್ಯಾಚರಣೆಗೆ ತೊಡಕು ಉಂಟಾಗಿತ್ತು. ನಂತರ ಕ್ರೇನ್​ ಮೂಲಕ ಮೇಲೆತ್ತುವ ಪ್ರಯತ್ನ ನಡೆಸಲಾಗಿತ್ತಾದರೂ ಕೊನೆಯ ಕ್ಷಣದಲ್ಲಿ ಕೋಣ ಸಾವಿಗೀಡಾಗಿದೆ.

ABOUT THE AUTHOR

...view details