ಕರ್ನಾಟಕ

karnataka

ETV Bharat / state

ಕೊಡಗು: ಪತಿ ಬಂಧನ ಖಂಡಿಸಿ ಎಸ್​ಪಿ ಕಚೇರಿ ಎದುರು ಮಕ್ಕಳ ಜೊತೆ ಪತ್ನಿ ಪ್ರತಿಭಟನೆ - ಮಡಿಕೇರಿ ನಗರ ಠಾಣಾ ಪೊಲೀಸರು

ಮಡಿಕೇರಿ ತಾಲೂಕಿನ ಮರಗೂಡು ಗ್ರಾಮದ ನಿವಾಸಿ ಹರೀಶ್​​ ಎಂಬುವರನ್ನು ಪೊಲೀಸರು ಜಾತಿ ನಿಂದನೆ ಪ್ರಕರಣದಡಿ ವಿನಾ ಕಾರಣ ಬಂಧಿಸಿದ್ದಾರೆ ಎಂದು ಆರೋಪಿಸಿ ಪತ್ನಿ ವಿಮಾ, ಎಸ್​​ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.‌

Wife-children protest in SP office denouncing husband arrest
ಪತಿ ಬಂಧನ ಖಂಡಿಸಿ ಎಸ್​ಪಿ ಕಚೇರಿ ಎದುರು ಪ್ರತಿಭಟನೆ

By

Published : Dec 25, 2020, 6:54 PM IST

ಕೊಡಗು: ಪತಿ ಬಂಧನ ಖಂಡಿಸಿ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ಮಡಿಕೇರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಪತಿ ಬಂಧನ ಖಂಡಿಸಿ ಎಸ್​ಪಿ ಕಚೇರಿ ಎದುರು ಪ್ರತಿಭಟನೆ

ಮಡಿಕೇರಿ ತಾಲೂಕಿನ ಮರಗೂಡು ಗ್ರಾಮದ ನಿವಾಸಿ ಹರೀಶ್ ಎಂಬುವರನ್ನು ಪೊಲೀಸರು ಜಾತಿ ನಿಂದನೆ ಪ್ರಕರಣದಡಿ ವಿನಾ ಕಾರಣ ಬಂಧಿಸಿದ್ದಾರೆ ಎಂದು ಆರೋಪಿಸಿ ಪತ್ನಿ ವಿಮಾ, ಎಸ್​​ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.‌

ಓದಿ: ಆಟೋ‌ದಲ್ಲಿ ಗಾಂಜಾ‌ ಸಾಗಿಸುತ್ತಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

ಹರೀಶ್ ವಿರುದ್ಧ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಸುಳ್ಳು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.‌ ಪ್ರಕರಣ ದಾಖಲಿಸಿಕೊಳ್ಳುವಂತೆ ತಾಲೂಕು ಪಂಚಾಯಿತಿ ಸದಸ್ಯ ಅಪ್ರು ರವಿಂದ್ರ ಕುಮ್ಮಕ್ಕು ನೀಡಿದ್ದಾರೆ.‌

ನನ್ನ ಪತಿ ಆಸ್ತಿ ವಿವಾದ ವಿಚಾರದಲ್ಲಿ ಜಾತಿ ನಿಂದನೆಯ ಆರೋಪ ಎದುರಿಸುತ್ತಿದ್ದಾರೆ ಎಂದು ದೂರಿದ್ದಾರೆ.‌ ಮಕ್ಕಳ ಜೊತೆ ಪ್ರತಿಭಟನೆಗೆ ಮುಂದಾಗಿದ್ದ ಕೆಲ ಸಮಯದಲ್ಲಿ ಮಡಿಕೇರಿ ನಗರ ಠಾಣಾ ಪೊಲೀಸರು ಮಕ್ಕಳನ್ನು ಬಿಟ್ಟು ಮಹಿಳೆಯನ್ನು ಠಾಣೆಗೆ ಕರೆದೊಯ್ದರು.

ABOUT THE AUTHOR

...view details