ಮಡಿಕೇರಿ :ಕರ್ನಾಟಕದ ಕಾಶ್ಮೀರ ಕೊಡಗು ಹಸಿರು ಸೀರೆಯುಟ್ಟು, ಮಂಜಿನ ಹನಿಗಳ ಅಲಂಕಾರದೊಂದಿಗೆ ಅಣಿಯಾಗುತ್ತಿದೆ. ಅದರಲ್ಲೂ ಮಡಿಕೇರಿಯ ರಾಜಾ ಸೀಟ್ ಬಣ್ಣ ಬಣ್ಣದ ಪುಷ್ಪಗಳ ರಾಶಿ, ಬೆಟ್ಟ-ಗುಡ್ಡಗಳ ಪ್ರಕೃತಿ ಸೌಂದರ್ಯದೊಂದಿಗೆ ಪ್ರವಾಸಿಗರನ್ನು ತನ್ನ ಮಡಿಲಿಗೆ ಕೈಬೀಸಿ ಕರೆಯುತ್ತಿದೆ. ಕೊಡಗಿನಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಪ್ರಕೃತಿ ಹಚ್ಚ ಹಸಿರಿನಿಂದ ಮೈತುಂಬಿಕೊಂಡಿದೆ. ಪ್ರವಾಸಿಗರಿಗೆ ವೀಕೆಂಡ್ನಲ್ಲಿ ಒಂದು ರಿಲ್ಯಾಕ್ಸೇಷನ್ಗೆ ಈ ಜಾಗ ಈ ಸಮಯ ಸೂಕ್ತವಾಗಿದೆ.
ಮಳೆಯಿಂದಾಗಿ ಜಿಲ್ಲೆಯ ವನ ಸಿರಿಗಳೆಲ್ಲ ಹಚ್ಚ ಹಸಿರಿನಿಂದ ಕೂಡಿದ್ದು, ಅಂದಕ್ಕೆ ಮನಸೋತ ಪ್ರವಾಸಿಗರ ದಂಡೇ ಕೊಡಗಿನತ್ತ ಹರಿದು ಬರುತ್ತಿದೆ. ಕೊಡಗಿನ ಹಸಿರು ಮೈದಳೆದ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಹೆಚ್ಚಿನ ಪ್ರವಾಸಿಗರಿಂದ ಟೂರಿಸ್ಟ್ ಸ್ಪಾಟ್ಗಳು ಗಿಜಿಗುಡುತ್ತಿವೆ. ಸೆಲ್ಫಿ, ಫೋಟೋ ಶೂಟ್ ಮಾಡುತ್ತಾ ವಿಕೇಂಡ್ ಮಸ್ತಿ ಮಾಡುತ್ತಾ ರೀಲಾಕ್ಸ್ ಮೂಡ್ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ವೀಕೆಂಡ್ ಹಾಗೂ ಮಕ್ಕಳಿಗೆ ಬೇಸಿಗೆ ರಜೆ ಇರುವುದರಿಂದ ರಾಜ್ಯ ಹಾಗೂ ಹೊರ ರಾಜ್ಯದ ಪ್ರವಾಸಿಗರು ಕೊಡಗಿನತ್ತ ದಾಂಗುಡಿ ಇಡುತ್ತಿದ್ದಾರೆ. ಕೊಡಗಿಗೆ ಬಂದ ಮೇಲೆ ರಾಜಾ ಸೀಟ್ಗೆ ಎಂಟ್ರಿ ಕೊಡದೆ ಹೋಗೋಕೆ ಯಾರೊಬ್ಬರಿಗೂ ಮನಸ್ಸೇ ಬರೋದಿಲ್ಲ. ಹೀಗಾಗಿ, ಕೊಡಗಿಗೆ ಆಗಮಿಸಿಸೋ ಪ್ರವಾಸಿಗರೆಲ್ಲ ರಾಜಾಸೀಟ್ಗೆ ಒಂದು ರೌಂಡ್ ವಿಸಿಟ್ ಕೊಟ್ಟು ಹೋಗುತ್ತಾರೆ.