ಕರ್ನಾಟಕ

karnataka

ETV Bharat / state

ಕೊಡಗಿಗೆ ಕೇಂದ್ರದ ಬಳಿ 500 ಕೋಟಿ ಪ್ಯಾಕೇಜ್​ ಕೇಳಿದ್ದೇವೆ: ಸಿಎಂ ಬಿಎಸ್‌ವೈ

ಕೇಂದ್ರ ಸರ್ಕಾರದ ಬಳಿ 500 ಕೋಟಿ ಪ್ಯಾಕೇಜ್ ಬಿಡುಗಡೆ ಮಾಡುವಂತೆ ಮಾತನಾಡಿದ್ದೇವೆ. ಸ್ಥಳೀಯ ನಾಯಕರು ಹಾಗೂ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸಿಎಂ ಬಿಎಸ್‌ವೈ

By

Published : Aug 29, 2019, 5:08 PM IST

ಕೊಡಗು: ಕೇಂದ್ರ ಸರ್ಕಾರದ ಬಳಿ 500 ಕೋಟಿ ಪ್ಯಾಕೇಜ್ ಬಿಡುಗಡೆ ಮಾಡುವಂತೆ ಮಾತನಾಡಿದ್ದೇವೆ. ಸ್ಥಳೀಯ ನಾಯಕರು ಹಾಗೂ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸಿಎಂ ಬಿ.ಎಸ್.ಯಡಿಯೂರಪ್ಪ

ಕುಶಾಲನಗರದ ಸಮೀಪ ಇರುವ ಕೂಡಿಗೆ ಸೈನಿಕ ಶಾಲೆಯ ಹೆಲಿಪ್ಯಾಡ್‌ಗೆ ಆಗಮಿಸಿ ಗೌರವ ವಂದನೆ ಸ್ವೀಕರಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು‌. ರಾಜ್ಯದಲ್ಲಿ ಆಗಿರುವ ನೆರೆ ಪೀಡಿತ ಪ್ರದೇಶಗಳಿಗೆ ಕೇಂದ್ರ ಅಧ್ಯನ ತಂಡ ಆಗಮಿಸಿ ವಾಸ್ತವ ಪರಿಸ್ಥಿತಿ ಪರಿಶೀಲಿಸಿದೆ. ಮೂರ್ನಾಲ್ಕು ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಗೆ ಬರಲಿದ್ದು, ಅವರಿಗೆ ನೆರೆ ಹಾವಳಿಯಿಂದ ಆಗಿರುವ ಸಂಕಷ್ಟಗಳ ಬಗ್ಗೆ ವಿವರಿಸುತ್ತೇನೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ದೊಡ್ಡ ಮಟ್ಟದ ಅನುದಾನವನ್ನು ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದರು.

ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳಾದ ನೆಲ್ಯಹುದಿಕೇರಿ ಹಾಗೂ ಕುಂಬಾರಗುಂಡಿಗೆ ಭೇಟಿ ನೀಡುತ್ತೇನೆ‌. ಅದಕ್ಕೂ ಮೊದಲು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಮನೆಗಳನ್ನು ಕಟ್ಟಿಸುವ ಕೆಲಸವೂ ಆಗಲಿದೆ ಎಂದರು.

ಜಿಲ್ಲೆಗೆ ಎರಡು ದಿನಗಳ ಕಾಲ ಪ್ರವಾಹ ಪರಿಸ್ಥಿತಿ ಕುರಿತು ವರದಿಗೆ ಆಗಮಿಸಿದ್ದ ಸಚಿವ ಎಸ್.ಸುರೇಶ್ ಕುಮಾರ್ ಹಾಗೂ ಕೇಂದ್ರ ಅಧ್ಯಯನ ತಂಡದೊಂದಿಗೆ ಕಾಣಿಸಿಕೊಳ್ಳದ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚ ರಂಜನ್ ಇಂದು ಕಾಣಿಸಿಕೊಂಡಿದ್ದರು.

ABOUT THE AUTHOR

...view details