ಕೊಡಗು:ಜಿಲ್ಲೆಯ ಎರಡನೇ ಮೊಣ್ಣಂಗೇರಿಯಲ್ಲಿ ಮತ್ತೆ ಬೆಟ್ಟದಲ್ಲಿ ಜಲ ಸ್ಫೋಟ ಸಂಭವಿಸಿದೆ. 2018ರಲ್ಲಿ ಭೀಕರ ಜಲಸ್ಫೋಟಕ್ಕೆ ಎರಡನೇ ಮೊಣ್ಣಂಗೇರಿ ಗ್ರಾಮ ಒಳಗಾಗಿತ್ತು. ಸ್ಥಳೀಯರಿಗೆ ಭಾರಿ ಸದ್ದಿನ ಅನುಭವ ಆಗಿದ್ದು, ನಿನ್ನೆ ರಾತ್ರಿ ಕೂಡ ಕೆಲವರಿಗೆ ಸ್ಫೋಟದ ಸದ್ದು ಕೇಳಿದೆ. ಎರಡನೇ ಮೊಣ್ಣಂಗೇರಿಯಲ್ಲಿ ಹರಿಯುವ ನೀರು ಸ್ಫೋಟದಿಂದಾಗಿ ಕಲ್ಮಷಗೊಂಡಿದೆ.
ಬೆಟ್ಟದಲ್ಲಿ ಜಲ ಸ್ಫೋಟ: ಆತಂಕದಲ್ಲಿ ಎರಡನೇ ಮೊಣ್ಣಂಗೇರಿ ಗ್ರಾಮಸ್ಥರು - ಆತಂಕದಲ್ಲಿ ಎರಡನೇ ಮೊಣ್ಣಂಗೇರಿ ಗ್ರಾಮಸ್ಥರು
ಕೊಡಗಿನ ಎರಡನೇ ಮೊಣ್ಣಂಗೇರಿ ಗ್ರಾಮದ ಸಮೀಪವಿರುವ ಬೆಟ್ಟದಲ್ಲಿ ಜಲ ಸ್ಫೋಟವಾಗಿದೆ. ಸ್ಥಳೀಯರಿಗೆ ಭಾರಿ ಸದ್ದಿನ ಅನುಭವವಾಗಿದ್ದು, ಆತಂಕದಲ್ಲಿ ಗ್ರಾಮಸ್ಥರಿದ್ದಾರೆ.
ಬೆಟ್ಟದಲ್ಲಿ ಜಲ ಸ್ಫೋಟ
ನೀರಿನೊಂದಿಗೆ ಕುಸಿದ ಮಣ್ಣು, ಮರದ ಧಿಮ್ಮಿಗಳು ಬೆಟ್ಟದಿಂದ ಹರಿದು ಬರುತ್ತಿವೆ. ರಾಮ ಕೊಲ್ಲಿ ಸೇತುವೆಯ ಎರಡು ಭಾಗದ ಮಣ್ಣು ಕೊಚ್ಚಿ ಹೋಗಿದ್ದು, ಮರದ ದಿಮ್ಮಿಗಳನ್ನು ಹಾಕಿ ಸಂಚಾರ ಮಾಡಲಾಗುತಿತ್ತು. ಕೆಳಭಾಗದಲ್ಲಿ ಜಿಲ್ಲಾಡಳಿತ ಮರಳು ಮೂಟೆಗಳನ್ನು ಹಾಕಿತ್ತು. ಆದರೆ ನೀರಿನ ರಭಸಕ್ಕೆ ಮರಳಿನ ಮೂಟೆಗಳು ಕೊಚ್ಚಿ ಹೋಗಿವೆ. ಇದರಿಂದ ಸೇತುವೆ ಮೇಲೆ ಶಾಲಾ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಸಂಚಾರ ಮಾಡಲು ಭಯಪಡುವಂತಾಗಿದೆ.
ಇದನ್ನೂ ಓದಿ:ಕೃಷಿ ಹೊಂಡ ಸೇರಿದಂತೆ ವಿವಿಧ ಯೋಜನೆಗಳಡಿ ರೈತರಿಗೆ ಭರ್ಜರಿ ಸಬ್ಸಿಡಿ.. ಈಗಲೇ ಅರ್ಜಿ ಸಲ್ಲಿಸಿ
Last Updated : Jul 19, 2022, 5:07 PM IST