ಕರ್ನಾಟಕ

karnataka

ETV Bharat / state

ಕುಟ್ಟ ಗ್ರಾಮದಲ್ಲಿ ಗೋಡೆ ಕುಸಿದು 70ರ ವೃದ್ಧೆ ಸಾವು - ಕುಟ್ಟ ಗ್ರಾಮದಲ್ಲಿ ಗೋಡೆ ಕುಸಿದು 70ರ ವೃದ್ಧೆ ಸಾವು

ಕುಟ್ಟ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದು ವೃದ್ಧೆವೋರ್ವರು ಸಾವನ್ನಪ್ಪಿದ್ದಾರೆ.

Wall collapsed in Kutta village; one died
ಕುಟ್ಟ ಗ್ರಾಮದಲ್ಲಿ ಗೋಡೆ ಕುಸಿದು 70ರ ವೃದ್ಧೆ ಮೃತ

By

Published : Sep 24, 2020, 12:03 PM IST

ವಿರಾಜಪೇಟೆ/ಕೊಡಗು: ಮನೆಯೊಂದರ ಗೋಡೆ ಕುಸಿದು ವೃದ್ಧೆ ಮೃತಪಟ್ಟಿರುವ ಘಟನೆ ತಾಲೂಕಿನ ಕುಟ್ಟ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.

ಸುಮಾರು 70 ವರ್ಷದ ಜ್ಯನಬಿ ಮೃತ ವೃದ್ಧೆ ಎಂದು ತಿಳಿದುಬಂದಿದೆ. ಜ್ಯನಬಿಯವರು ಹಲವಾರು ವರ್ಷಗಳಿಂದ ಕುಟ್ಟದಲ್ಲಿರುವ ಪೋಸ್ಟ್​​ ಆಫೀಸ್​​​ನಲ್ಲಿ ಕಸ ಗುಡಿಸುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಸಿಂಕೋನ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ ಒಬ್ಬರೇ ಜೀವನ ಮಾಡುತ್ತಿದ್ದರು.

ಇವರು ವಾಸಿಸುತ್ತಿದ್ದ ಮನೆಯು ಕಳೆದ ಕೆಲ ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಶಿಥಿಲಗೊಂಡಿದ್ದು, ಇವರು ಅಡುಗೆ ಮಾಡಲು ತೆರಳಿದ ಸಂದರ್ಭದಲ್ಲಿ ಅಡುಗೆ ಕೋಣೆಯ ಗೋಡೆ ಕುಸಿದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೃತರ ಮರಣೋತ್ತರ ಪರೀಕ್ಷೆ ಮಾಡಿಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ.

ABOUT THE AUTHOR

...view details