ಕೊಡಗು:ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಹಿನ್ನೆಲೆ ಮನೆಯಲ್ಲೇ ಇರುವಂತೆ ಸೂಚಿಸಿದ್ದರೂ ಹೊರಗೆ ತಿರುಗಾಡುತ್ತಿದ್ದ ವ್ಯಕ್ತಿಗೆ ಜಿಲ್ಲಾಡಳಿತ ನೋಟಿಸ್ ನೀಡಿದೆ.
ಜಿಲ್ಲಾಡಳಿತದ ಆದೇಶ ಉಲ್ಲಂಘನೆ; ಕೊರೊನಾ ಶಂಕಿತ ವ್ಯಕ್ತಿಗೆ ನೋಟಿಸ್ - ಕೊರೊನಾ ವೈರಸ್
ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕು ಸೇರಿದಂತೆ ವಿದೇಶಗಳಿಂದ ವಾಪಸಾದ 128 ಮಂದಿಯನ್ನು ಪತ್ತೆ ಹಚ್ಚಿದೆ. ಅವರೆಲ್ಲರ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಿದೆ.
![ಜಿಲ್ಲಾಡಳಿತದ ಆದೇಶ ಉಲ್ಲಂಘನೆ; ಕೊರೊನಾ ಶಂಕಿತ ವ್ಯಕ್ತಿಗೆ ನೋಟಿಸ್ violation-of-the-district-collector-order](https://etvbharatimages.akamaized.net/etvbharat/prod-images/768-512-6431942-thumbnail-3x2-virus.jpg)
ಕೊರೊನಾ ಶಂಕಿತ ವ್ಯಕ್ತಿಗೆ ನೋಟಿಸ್
ಐಪಿಸಿ ಸೆಕ್ಷನ್ 188 ಪ್ರಕಾರ ವಿರಾಜಪೇಟೆ ತಾಲೂಕಿನ ಸಿದ್ಧಾಪುರದ ವ್ಯಕ್ತಿಗೆ ನೋಟಿಸ್ ನೀಡಲಾಗಿದೆ. ವಿದೇಶದಿಂದ ವಾಪಸ್ ಬಂದಿದ್ದ ವ್ಯಕ್ತಿಯನ್ನು ಮನೆಯಲ್ಲೇ ಇರಿಸಿ ನಿಗಾ ವಹಿಸಲಾಗಿತ್ತು. ಆದರೆ, ಜಿಲ್ಲಾಡಳಿತ ನೀಡಿದ್ದ ಸೂಚನೆಯನ್ನು ಉಲ್ಲಂಘಿಸಿದ್ದ.
ಜಿಲ್ಲೆಯಲ್ಲಿ ಈಗಾಗಲೇ ವಿದೇಶಗಳಿಂದ ಹಿಂದಿರುಗಿದವರ ಪತ್ತೆ ಕೆಲಸ ಮುಂದುವರೆದಿದೆ. ಮಡಿಕೇರಿಯಲ್ಲಿ 56, ವಿರಾಜಪೇಟೆಯಲ್ಲಿ 31 ಮತ್ತು ಸೋಮವಾರಪೇಟೆಯಲ್ಲಿ 44 ಸೇರಿದಂತೆ ವಿದೇಶಗಳಿಂದ ವಾಪಸಾದ 128 ಮಂದಿಯನ್ನು ಪತ್ತೆ ಹಚ್ಚಿ ಆರೋಗ್ಯ ಇಲಾಖೆ ಅವರ ಮನೆಯಲ್ಲೇ ನಿಗಾ ಇರಿಸಿದೆ. ಇದುವರೆಗೆ 3 ಜನರಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.