ಕೊಡಗು: ಮಾರಕ ರೋಗ ಕೋವಿಡ್ 19 ತಡೆಯಲು ರಾಜ್ಯ ಸರ್ಕಾರ ರಾಜ್ಯದೆಲ್ಲೆಡೆ ಕೊರೊನಾ ಕರ್ಫ್ಯೂ ಹೇರಿದೆ. ಆದ್ರೆ ಮಡಿಕೇರಿ ಜನರು ಬೇಕಬಿಟ್ಟಿ ರಸ್ತೆಯಲ್ಲಿ ಅಡ್ಡಾಡುತ್ತಿರುವ ಹಿನ್ನೆಲೆ ಮಡಿಕೇರಿಯ ಟೋಲ್ ಗೇಟ್ ಬಳಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಕೊಡಗು: ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳು ಸೀಜ್ - vehicles seize in kodagu
ಕೊಡಗಿನಲ್ಲಿ ಮನೆ ಬಿಟ್ಟು ರಸ್ತೆಗಳಿದ ವಾಹನ ಸವಾರರಿಗೆ ಬ್ರೇಕ್ ಹಾಕಲು ಅನಗತ್ಯವಾಗಿ ಹೊರ ಬಂದಿರುವ ವಾಹನಗಳನ್ನು ಪೊಲೀಸರು ಸೀಜ್ ಮಾಡುತ್ತಿದ್ದಾರೆ.
![ಕೊಡಗು: ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳು ಸೀಜ್ kdg](https://etvbharatimages.akamaized.net/etvbharat/prod-images/768-512-11604235-thumbnail-3x2-kdg.jpg)
ಮನೆ ಬಿಟ್ಟು ರಸ್ತೆಗಳಿದ ವಾಹನ ಸವಾರರಿಗೆ ಬ್ರೇಕ್ ಹಾಕಲು ಅನಗತ್ಯವಾಗಿ ಹೊರ ಬಂದಿರುವ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ. ಬೇಕಾಬಿಟ್ಟಿ ಓಡಾಡುವವರಿಗೆ ಪೊಲೀಸರು ಖಡಕ್ ವಾರ್ನಿಂಗ್ ನೀಡುತ್ತಿದ್ದಾರೆ. ಮಡಿಕೇರಿಯಲ್ಲಿ ತಿಮ್ಮಯ್ಯ ವೃತ್ತ, ಟೋಲ್ ಗೇಟ್, ಕಾಲೇಜ್ ರೋಡ್ಗಳಲ್ಲಿವಾಹನ ತಪಾಸಣೆ ಮಾಡುತ್ತಿದ್ದಾರೆ. ಎಲ್ಲ ವಾಹನಗಳನ್ನು ಅಡ್ಡಗಟ್ಟಿ ತಪಾಸಣೆ ಮಾಡಿ ವಶಕ್ಕೆ ಪಡೆಯುತ್ತಿದ್ದಾರೆ.
ಪೊಲೀಸರ ಕ್ರಮಕ್ಕೆ ವಾಹನ ಸವಾರರು ಪರದಾಡುತ್ತಿದ್ದಾರೆ. ಅನಿವಾರ್ಯ ಕಾರಣಕ್ಕೆ ಬರುವ ವಾಹನಗಳನ್ನು ಬಿಟ್ಟು ಕಳುಹಿಸುತ್ತಿದ್ದು, ಜನರಿಗೆ ರೋಗದ ಬಗ್ಗೆ ಮಾಹಿತಿ ಕೊಡುತ್ತ ಕಳುಹಿಸುತ್ತಿದ್ದಾರೆ. ಅಲ್ಲದೇ ಕೊಡಗು ಜಿಲ್ಲೆಗೆ ಬರುವ ಅಂತಾರಾಜ್ಯ ಮತ್ತು ಅಂತರ ಜಿಲ್ಲೆಯ ರಸ್ತೆಯನ್ನು ಬಂದ್ ಮಾಡಿ ಚೆಕ್ ಪೋಸ್ಟ್ ಗಳಲ್ಲಿ ಬಿಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ.