ಮಡಿಕೇರಿ:ಸೋಮವಾರಪೇಟೆ ತಾಲೂಕು ಸುಂಟಿಕೊಪ್ಪದ ಹರದೂರು ಹೊಳೆ ಸಮೀಪ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಹರದೂರು ಹೊಳೆ ಬಳಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ..! - somavarpete news
ಸೋಮವಾರಪೇಟೆ ತಾಲೂಕು ಸುಂಟಿಕೊಪ್ಪದ ಹರದೂರು ಹೊಳೆ ಸಮೀಪ ಅಪರಿಚಿತನ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಹೊಳೆ ಸಮೀಪ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮೃತದೇಹ ಪತ್ತೆ..!
ಅಪರಿಚಿತ ವ್ಯಕ್ತಿಯ ಮೃತದೇಹ ಗುರುತು ಸಿಗಲಾರದಷ್ಟು ಕೊಳೆತಿದ್ದು, ಮುಖದ ಭಾಗ ನೀರಿನಲ್ಲಿ ಮುಳುಗಿದ್ದರಿಂದ ವ್ಯಕ್ತಿಯ ಗುರುತು ಸಾಧ್ಯವಾಗಿಲ್ಲ. ಮೃತ ವ್ಯಕ್ತಿ ಕೆಂಪು ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ಹಾಕಿದ್ದು, ಮೃತದೇಹ ಹಟ್ಟಿಹೊಳೆ ಕಡೆಯಿಂದ ತೇಲಿ ಬಂದಿರಬಹುದು ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Last Updated : Sep 12, 2019, 9:11 AM IST