ಕೊಡಗು:ಚೆಕ್‌ಪೋಸ್ಟ್ ಮೂಲಕ ಅಕ್ರಮವಾಗಿ ಪ್ರವೇಶಿಸಿ ವ್ಯಾಪಾರ ಮಾಡುತ್ತಿದ್ದ ಮೈಸೂರು ಮೂಲದ ವ್ಯಾಪಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವ ಘಟನೆ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದಲ್ಲಿ ನಡೆದಿದೆ.
ಅನಧಿಕೃತವಾಗಿ ಚೆಕ್‌ಪೋಸ್ಟ್‌ನಲ್ಲಿ ಪ್ರವೇಶಿಸಿ ವ್ಯಾಪಾರ: ತರಾಟೆ ತೆಗೆದುಕೊಂಡ ಗ್ರಾಮಸ್ಥರು...! - ಕುಶಾಲನಗರ ಚೆಕ್‌ಪೋಸ್ಟ್
ಕುಶಾಲನಗರ ಚೆಕ್‌ಪೋಸ್ಟ್ ಮೂಲಕ ಅಕ್ರಮವಾಗಿ ಪ್ರವೇಶಿಸಿ ಕೊಡಗು ಜಿಲ್ಲೆಯ ವಿವಿಧೆಡೆ ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ ಎನ್ನುವ ಆರೋಪದ ಮೇರೆಗೆ ಕಡಗದಾಳು ಗ್ರಾಮ ಪಂಚಾಯಿತಿ ವತಿಯಿಂದ ವಾಹನ ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಅನಧಿಕೃತವಾಗಿ ಚೆಕ್‌ಪೋಸ್ಟ್‌ನಲ್ಲಿ ಪ್ರವೇಶಿಸಿ ವ್ಯಾಪಾರ
ಕುಶಾಲನಗರ ಚೆಕ್‌ಪೋಸ್ಟ್ ಮೂಲಕ ಅಕ್ರಮವಾಗಿ ಪ್ರವೇಶಿಸಿದ್ದು, ಜಿಲ್ಲೆಯ ವಿವಿಧೆಡೆ ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ ಎನ್ನುವ ಆರೋಪದ ಮೇರೆಗೆ
ಕಡಗದಾಳು ಗ್ರಾಮ ಪಂಚಾಯಿತಿ ವತಿಯಿಂದ ವಾಹನ ವಶಕ್ಕೆ ಪಡೆದಿದ್ದಾರೆ.
ವ್ಯಾಪಾರಿಗಳು ಪಿರಿಯಾಪಟ್ಟಣದ ಅನುಮತಿ ಪತ್ರ ಪಡೆದು ಮಡಿಕೇರಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಚೆಕ್‌ಪೋಸ್ಟ್‌ನಲ್ಲಿ ಚೆಕಿಂಗ್ ಮಾಡಿಲ್ಲ. ಗಾಡಿ ನಂಬರ್ ಕೂಡಾ ಎಂಟ್ರಿ ಮಾಡಿ ಬಂದಿದ್ದೇವೆ ಎಂದು ತರಕಾರಿ ಮಾರಾಟ ಮಾಡಲು ಬಂದವರು ಸುಳ್ಳು ಹೇಳುತ್ತಿದ್ದಾರೆ ಎನ್ನಲಾಗಿದೆ.