ಕೊಡಗು : ಜಿಲ್ಲೆಯಲ್ಲಿ ಹುಲಿ ದಾಳಿ ಮುಂದುವರೆದಿದ್ದು ನಿನ್ನೆ ಓರ್ವ ಬಾಲಕ ಮತ್ತು ಇಂದು ಓರ್ವ ಮಹಿಳೆ ವ್ಯಾಘ್ರದ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಹುಲಿಯನ್ನು ಸೆರೆ ಹಿಡಿಯುವಂತೆ ಟಿ ಶೆಟ್ಟಿಗೇರಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಅರಣ್ಯ ಇಲಾಖೆ ಎಚ್ಚೆತ್ತು ಕೊನೆಗೂ ಹುಲಿಯನ್ನು ಸೆರೆ ಹಿಡಿದಿದೆ.
ಕೊಡಗಿನಲ್ಲಿ ವ್ಯಾಘ್ರ ದಾಳಿಗೆ ಇಬ್ಬರು ಬಲಿ ಪ್ರಕರಣ : ಹಂತಕ ಹುಲಿ ಸೆರೆ - ಕೊಡಗು ಹುಲಿ ದಾಳಿ
ಟಿ ಶೆಟ್ಟಿಗೇರಿ ಗ್ರಾಮದಲ್ಲಿ ನಿನ್ನೆ ಬಾಲಕನ್ನು ಹುಲಿ ಬಲಿ ಪಡೆದಿತ್ತು. ಇಂದು ಮತ್ತೆ ದಾಳಿ ನಡೆಸಿ ಮಹಿಳೆಯನ್ನು ಕೊಂದಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಹುಲಿಯನ್ನು ಸೆರೆಹಿಡಿದಿದೆ.
ಹುಲಿ ದಾಳಿ
ಟಿ ಶೆಟ್ಟಿಗೇರಿ ಗ್ರಾಮದಲ್ಲಿ ನಿನ್ನೆ ಬಾಲಕನನ್ನು ಹುಲಿ ಬಲಿ ಪಡೆದಿತ್ತು. ಇಂದು ಮತ್ತೆ ದಾಳಿ ನಡೆಸಿ ಮಹಿಳೆಯನ್ನು ಕೊಂದಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಅರಣ್ಯ ಇಲಾಖೆ ಅಧಿಕಾರಿಗಳು ಸಾಕಾನೆಗಳ ಮೂಲಕ ಹುಲಿ ಸೆರೆ ಹಿಡಿದಿದ್ದಾರೆ.ಮುತ್ತಿಗೋಡು ಶಿಬಿರದಿಂದ ಅಭಿಮನ್ಯು ಆನೆ ಜೊತೆ ಮತ್ತೊಂದು ಆನೆ ಈ ವ್ಯಾಘ್ರ ಕಾರ್ಯಾಚರಣೆಗೆ ಇಳಿದಿದ್ದವು.
Last Updated : Feb 22, 2021, 1:31 PM IST