ಕೊಡಗು/ಮಡಿಕೇರಿ:ಕಟುಕರ ಗುಂಡೇಟಿಗೆ ಎರಡು ಹಸುಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಡಿಕೇರಿ ತಾಲೂಕಿನ ಕಡಗದಾಳು ಸಮೀಪದ ಬ್ರೂಕ್ ವ್ಯೂ ಎಸ್ಟೇಟ್‌ನಲ್ಲಿ ರಾತ್ರಿ ನಡೆದಿದೆ.
ಮಡಿಕೇರಿ: ಗುಂಡೇಟಿಗೆ ಎರಡು ಹಸುಗಳು ಬಲಿ - ಕೊಡಗಿನಲ್ಲಿ ಹಸು ಸಾವು ಸುದ್ದಿ
ಗುಂಡು ತಗುಲಿದ ಪರಿಣಾಮ ಎರಡು ಹಸುಗಳು ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಎಸ್ಟೇಟ್ ಒಂದರಲ್ಲಿ ನಡೆದಿದೆ.
ಗುಂಡೇಟಿಗೆ ಎರಡು ಹಸುಗಳು ಬಲಿ
ನಿನ್ನೆ ತಡರಾತ್ರಿ ನಡೆದಿರು ಘಟನೆಯಲ್ಲಿ ಎರಡು ಹಸುಗಳು ಗುಂಡೇಟಿಗೆ ಬಲಿಯಾಗಿವೆ. ತೋಟದಲ್ಲಿ ಹಸುಗಳನ್ನು ಮೇಯಲು ಬಿಟ್ಟಿದ್ದಾಗ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎರಡು ಹಸುಗಳನ್ನು ಕೊಂದಿರುವುದು ಸಾಕಷ್ಟು ಅನುಮಾನಕ್ಕೆ ಗ್ರಾಸವಾಗಿದ್ದು ಎಸ್ಟೇಟ್ ಮ್ಯಾನೇಜರ್ ಹನುಮಾನ್ ದಾಸ್ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.