ಕೊಡಗು: ಜಿಲ್ಲೆಯಲ್ಲಿ ಇಂದು ಹೊಸದಾಗಿ ಎರಡು ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತ ಸಂಖ್ಯೆ 219 ಕ್ಕೆ ಏರಿಕೆಯಾಗಿದೆ.
ಕೊಡಗಿನಲ್ಲಿ ಎರಡು ಹೊಸ ಕೇಸ್ ಪತ್ತೆ: 219 ಕ್ಕೇರಿದ ಸೋಂಕಿತರ ಸಂಖ್ಯೆ - ಕೊಡಗು ಕೊರೊನಾ ಪ್ರಕರಣಗಳು
ಕೊಡಗಿನಲ್ಲಿ ಇಂದು ಎರಡು ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದು, ಸೋಂಕಿತ ಸಂಖ್ಯೆ 219 ಕ್ಕೆ ಏರಿಕೆಯಾಗಿದೆ.

Kodagu
ವಿರಾಜಪೇಟೆ ತಾಲೂಕಿನ ಬಾಡಗ ಬಾಣಂಗಾಲ ಗ್ರಾಮದ ಹುಂಡಿ ಪ್ರದೇಶದಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 19 ವರ್ಷದ ಹುಡುಗ ಹಾಗೂ ಮೈಸೂರಿನ ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಸೋಮವಾರಪೇಟೆ ತಾಲೂಕಿನ ನಂಜರಾಯಪಟ್ಟಣದ ರಸೂಲ್ ಬೆಟ್ಟಗೇರಿ ಗ್ರಾಮದ ನಿವಾಸಿಯಾದ 65 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.
ಬೆಟ್ಟಗೇರಿ ಗ್ರಾಮ ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 96 ಕಂಟೈನ್‌ಮೆಂಟ್ ವಲಯಗಳಿದ್ದು, ಒಟ್ಟು 129 ಸಕ್ರಿಯ ಪ್ರಕರಣಗಳಿವೆ. ಮೂವರು ಮೃತಪಟ್ಟಿದ್ದಾರೆ.